ಮಕ್ಕಳಿಗಾಗಿ ಮೂರು ದಿನದ ಆಧ್ಯಾತ್ಮಿಕ ಶಿಬಿರ

ಕಲಬುರಗಿ,ಏ.25-ಸತ್ಯತೆ, ಶಾಂತಿ, ಸ್ವಚ್ಛತೆ, ಪವಿತ್ರತೆ ಅಂತಹ ವಿಷಯ ಕುರಿತು ಪಾಠ ಹೇಳಿ ಕೊಡುವ ಇದು ನಾ ಕಂಡ ಮೊದಲನೆ ಶಿಬಿರ. ಸಾಮಾನ್ಯವಾಗಿ 20-30 ಮಕ್ಕಳಿರುವ ಶಿಬಿರ ಕಂಡಿದ್ದೇನೆ ಆದರೆ ಇಲ್ಲಿ ನೀವು ನೂರಕ್ಕೂ ಮೇಲ್ಪಟ್ಟು ಇದ್ದದ್ದನ್ನು ನೋಡಿ ನನಗೆ ಬಹಳ ಆನಂದ ಆಗವುದಲ್ಲದೆ ಮಕ್ಕಳಾದ ನಿಮ್ಮ ಪಾಲಕರ ಪ್ರತಿ ಅಭಿಮಾನ, ಕಾರಣ ಇಂತಹ ವಿಷಯ ಪಟ್ಟಿ ಓದಿ ನಿಮ್ಮನ್ನು ಇಲ್ಲಿ ಕಳುಹಿಸಿದ್ದಾರೆ ಎಂದು ರೋಟರಿ ಇನ್ನರವ್ಹೀಲ ಅಧ್ಯಕ್ಷೆ ಮಹಾದೇವಿ ಪಾಟಿಲ ನುಡಿದರು.
ಅವರು ನಗರ ಹೊರದಲ್ಲಿರುವ ಬ್ರಹ್ಮಾಕುಮಾರಿಸ್ ಅಮೃತಸರೋವರದಲ್ಲಿ 10ರಿಂದ 16ವರ್ಷದ ಮಕ್ಕಳಿಗಾಗಿ ಏರ್ಪಡಿಸಲಾದ ಮೂರು ದಿನದ ಆಧ್ಯಾತ್ಮಿಕ ಶಿಬಿರದಲ್ಲಿ ಮುಖ್ಯಅಥಿತಿಗಳಾಗಿ ಮಾತನಾಡುತ್ತಿದ್ದರು.
ಇನ್ನೋರ್ವ ಅತಿಥಿ ಮಹಿಳಾ ಹಾಗೂ ಮಕ್ಕಳ ಇಲಾಖೆಯ ಅಧಿಕಾರಿಯಾದ ಮುರುಗೇಶ ನಿರಾಣಿಯವರು ಮಾತನಾಡುತ್ತ ಸರಕಾರದ ವತಿಯಿಂದ ಆಯೋಜಿಸಲಾಗುತ್ತಿರುವ ಮಕ್ಕಳ ಶಿಬಿರಕ್ಕಿಂತ ಇದು ಭಿನ್ನವಾದ ಶಿಬಿರವಾಗಿದೆ, ಕಾರಣ ಇದರಲ್ಲಿ ನಡೆ, ನುಡಿ, ನೋಟ, ಆಹಾರ, ವ್ಯವಹಾರದ ಬಗ್ಗೆ ಜ್ಞಾನ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜಯೋಗಿನಿ ಬಿ ಕೆ ವಿಜಯಾದೀದಿ ಮಕ್ಕಳಿಗೆ ಶಿಸ್ತು, ಸಭ್ಯತಯ ಬಗ್ಗೆ ಬೋಧಿಸಿದರು. ಬಿ ಕೆ ಶಿವಲೀಲಾ, ಬಿಕೆ ದಾನೇಶ್ವರಿ, ಬಿಕೆ ಸವಿತಾರವರು ತಮ್ಮ ವಿಚಾರ ಮಂಡಿಸಿದರು.
ಮೂರುದಿನಗಳ ಕಾಲ ನಡೆಯುವ ಈ ಶಿಬಿರವು ಒಂದು ನೂತನ ಪ್ರಯೋಗವೆಂದು ರಾಜಯೋಗಿ ಬ್ರಹ್ಮಾಕುಮಾರ ಪ್ರೇಮಣ್ಣ ನುಡಿದರು.