ಮಕ್ಕಳಿಂದ ಶ್ರೀಹರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕಲಬುರಗಿ :ಸೆ.6: ಜೇವರ್ಗಿ ನಗರದ ಶ್ರೀಹರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೇ ಅಯೋಜಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಕೆಕ್ ಕತ್ತರಿಸುವ ಮೂಕಾಂತರ ಗೌರವಪೂರ್ಣ ಮಾಲಾರ್ಪಣೆ ಶಿಕ್ಷಕರಿಗೆ ಮಾಡಿದ ಕಾರ್ಯಕ್ರಮ ಸಂಭ್ರಮದಿಂದ ಜರಗಿತು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಶಿಕ್ಷಕರಾದ ರಮೇಶ ಎ ಗುತ್ತೇದಾರ ಮಾತನಾಡುತ ಬೋಧಿಸುವ ತರಗತಿ ಒಂದು ದೇವರ ಮಂದಿರ ಇಲ್ಲಿ ಇರತಕಂತ ಮಕ್ಕಳೇ ಪರಮಾತ್ಮನ ಅವತಾರ ಇಲ್ಲಿ ದೊರೆತ ವೃತ್ತಿಯೇ ನನಗೆ ವರಧಾನ ಹಾಗೂ ಭಾಗ್ಯಶಾಲಿ ಎಂದು ಹೆಳುತಾ ಇಂತ ಪವಿತ್ರವಾದ ಸ್ಥಾನದಲ್ಲಿ ಬೋಧಿಸುವ ವಿಷಯದ ಬಗ್ಗೆ ಆಪಾರ ಆಸಕ್ತಿ ಹಾಗೂ ಕುತುಹಲದಿಂದ ಬೋಧಿಸಿದರೆ ಶಿಕ್ಷಕ ವೃತ್ತಿಗೆ ಒಂದು ಘನತೆ ಲಬಿಸುವುದೆಂದು ತಿಳಿಸಿದ್ದರು, ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಶಂಕ್ರೇಪ್ಪ ಬಡಿಗೇರ, ಹಣಮಂತ ಜ್ಯೋತೆಪಗೋಳ, ಮುಖ್ಯಗುರು ಹಣಮಂತ ಕೋರಳ್ಳಿ ಇದ್ದರು.