ಮಕ್ಕಳಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು

ಬಳ್ಳಾರಿ, ಮೇ.28: ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ಅದಕ್ಕಾಗಿ ಕೋವಿಡ್ ಸೋಂಕು ಮಕ್ಕಳಲ್ಲಿ‌ ಹೆಚ್ಚಾಗಿ ಕಂಡು ಬರಲ್ಲ ಎಂಬ‌ ಮಾತು ಕರೋನಾದ ಮೊದಲ ಅಲೆಯಲ್ಲಿ ಇತ್ತು.
ಆದರೆ ಕೋವಿಡ್ ನ ಎರಡನೇ ಅಲೆಯಲ್ಲೆ ಮೊದಲಿನ ಮಾತು ಸುಳ್ಳು ಎಂಬಂತೆ ಮಕ್ಕಳಲ್ಲೂ ಈಗ ಕೊವಿಡ್ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ.
ಇನ್ನು ಮೂರನೇ ಅಲೆಯಲ್ಲಿ‌ ಇದು ಮಕ್ಕಳ ಮೇಲೆ ವಕ್ರದೃಷ್ಟಿ ಬೀರಲಿದೆ ಎನ್ನಲಾಗುತ್ತಿದೆ. ಅವಿಭಜಿತ ಜಿಲ್ಲೆಯಲ್ಲಿ 18 ವರ್ಷದ ಒಳಗಿನ ಮಕ್ಕಳಲ್ಲಿ ಕೊರೋನ ಸೋಂಕು ಈಗ ಹೆಚ್ಚಾಗಿ ಕಾಣಿಸುತ್ತಿದೆ. ಈವರಗೆ ಎರೆಡನೇ ಅಲೆಯಲ್ಲಿ 3200 ಕ್ಕೂ ಅಧಿಕ ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸೋಂಕು ಕಾಣಿಸಿಕೊಂಡ ಮಕ್ಕಳಲ್ಲಿ ಬಹುತೇಕರು ವಿಧ್ಯಾರ್ಥಿಗಳಾಗಿದ್ದಾರೆ.
ಈವರೆಗೆ 2400 ಕ್ಕೂ ಹೆಚ್ಚು ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದಾ ಡಿಸ್ಚಾರ್ಜ್ ಆಗಿದ್ದು ಪ್ರಸ್ತುತ 800 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಸಾವನ್ನಪ್ಪಿದ್ದಾರೆ. ಮಕ್ಕಳಲ್ಲಿ ಯ್ಯೂಮಿನಿಟಿ ಪವರ್ ಜಾಸ್ತಿ ಇರುವುದರಿಂದ ಸೋಂಕಿನಿಂದ ಬೇಗ ಗುಣಮುಖರಾಗುತ್ತಿದ್ದಾರೆಂದು ವೈದ್ಯರು ಹೇಳುತ್ತಿದ್ದಾರೆ.
ಮೂರನೇ ಅಲೆಯಲ್ಲಿ ಅತ್ಯಂತ ಜಾಗೃತರಾಗಿರಬೇಕು ಎನ್ನುವದು ತಜ್ಞರ ಅಭಿಪ್ರಾಯವಾಗಿದೆ. ಮಕ್ಕಳಲ್ಲಿ ಕೊರೋನ ಬಗ್ಗೆ ಭಯಬೇಡ, ಜಾಗೃತಿ ಇರಲಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಜನಾರ್ಧನ ಹೇಳಿದ್ದಾರೆ.