ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಿ : ಚಿಕ್ಕಬಸೆ

ಔರಾದ್: ಸೆ.19:ಅಕ್ಷರದ ಜೊತೆಗೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಹೊಣೆ ಸಮಾಜದ ಪ್ರಜ್ಞಾವಂತ ನಾಗರಿಕರ ಮೇಲಿದೆ ಎಂದು ಪೆÇೀಲಿಸ ಪೇದೆ ಸಂಜೀವಕುಮಾರ ಚಿಕ್ಕಬಸೆ ಹೇಳಿದರು.

ತಾಲೂಕಿನ ಕೌಡಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಮಂಗಲಾ ನಂದಕುಮಾರ್ ಅಡಸಾರೆ ಅವರ ಮಗನ ಜನುಮದಿನದ ಅಂಗವಾಗಿ ಗ್ರಾಮರ ಪುಸ್ತಕ ಹಾಗೂ ನೋಟಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಾಗಿದೆ ಎಂದು ಹೇಳಿದರು.

ಶಿಕ್ಷಕ ಮುತ್ತಣ್ಣ ರಂಡ್ಯಾಳೆ ಮಾತನಾಡಿ, ಮಕ್ಕಳಿಗೆ ಅಕ್ಷರ ಕಲಿಸಿಕೊಟ್ಟರೆ ಸಾಲದು, ಅದರ ಜೊತೆಗೆ ಬದುಕಿಗೆ ಬೇಕಾದ ಮೌಲ್ಯಗಳನ್ನು ಹಾಗೂ ವ್ಯಾವಹಾರಿಕ ಜ್ಞಾನವನ್ನು ನೀಡುವುದು ಒಬ್ಬ ಶಿಕ್ಷಕ ಮಾಡಬೇಕಾದ ಕರ್ತವ್ಯವಾಗಿದೆ ಎಂದು ಹೇಳಿದರು.

ಎಸ್ಡಿಎಂಸಿ ಅಧ್ಯಕ್ಷ ರಾಜಕುಮಾರ ಕೋರೆ ಮಾತನಾಡಿ, ಮಕ್ಕಳ ಮನಸ್ಸಿನಲ್ಲಿ ಉದಾತ್ತ ಚಿಂತನೆ ಗಳುಳ್ಳ ಕನಸನ್ನು ಬಿತ್ತುವ ಕಾರ್ಯವನ್ನು ಶಾಲೆಗಳು ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಬೇಲೂರೆ, ಲಾಲಪ್ಪಾ, ಜಗದೇವಿ, ಅಲ್ಪಾವತಿ, ವಿದ್ಯಾವತಿ, ರುಕ್ಮಿಣಿ, ಸರಸ್ವತಿ, ಶಿವಲಿಲಾ ಮಂಗಲಾ, ಸರೀತಾ, ವಿಜಯಕುಮಾರ್ ಲೋಣೆ, ವಿಜಯಶೇಖರ, ಅಂಬರೇಶ್, ಶಿವಾನಂದ, ಶಿವು ನಾಗರಾಳೆ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು.