ಮಕ್ಕಳಲ್ಲಿ ಸಾಧಿಸುವ ಛಲ ಮೂಡಿಸಿ

ಭಾಲ್ಕಿ:ಜೂ.2:ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಎಳೆ ವಯಸ್ಸಿನ ಮಕ್ಕಳಲ್ಲಿ ಸಾಧನೆ ಕಿಚ್ಚು ಮೂಡಿಸಿಬಿಟ್ಟರೆ, ಆ ಮಗುವಿನ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ಲೆಕ್ಚರ್ ಕಾಲೋನಿಯ ವೀರಭದ್ರೇಶ್ವರ ನವೋದಯ ಕೋಚಿಂಗ್ ಕ್ಲಾಸೆಸ್‍ನಲ್ಲಿ ನವೋದಯ/ಸೈನಿಕ್/ಕಿತ್ತೂರು ಸೈನಿಕ್ ಶಾಲೆಗಳಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ತಳಹದಿ ಹಾಕಿದರೆ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಡಾ.ಸುಪ್ರಿಯಾ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೀರಭದ್ರೇಶ್ವರ ನವೋದಯ ಕೋಚಿಂಗ್ ಕ್ಲಾಸೆಸ್‍ನ ಸಂಚಾಲಕ ಕೈಲಾಸ ಬಿರಾದಾರ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಸಿಆರ್‍ಪಿ ಶ್ರೀದೇವಿ ಹೂಗಾರ, ಶಶಿಕಾಂತ ಜೋಶಿ, ಸಂಜೀವಿನಿ ಬಿರಾದಾರ, ಶಿವಶರಣಪ್ಪ ಬಿರಾದಾರ, ಅಶ್ವಿನಿ ಬಿರಾದಾರ, ಸಂಗಮೇಶ ಬಿರಾದಾರ್, ವಿಕಾಸ ಕುಂಬಾರ, ಮಲ್ಲಿಕಾರ್ಜುನ ಭೂರೆ ಸೇರಿದಂತೆ ಹಲವರು ಇದ್ದರು.
ಸತೀಶ ಸಿದ್ದೇಶ್ವರೆ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.
ಸನ್ಮಾನ
2024-25ನೆಯ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನವೋದಯ, ಸೈನಿಕ್ ಶಾಲೆಗಳಿಗೆ ಆಯ್ಕೆಗೊಂಡ ಶ್ರೇಯಸ್ ಸತೀಶಕುಮಾರ, ಸಿದ್ಧಾರೂಢ ಬಾಲರಾಜ, ಸ್ವರಾ ಶ್ರೀನಿವಾಸ ಕಾವ್ಯಾಂಜಲಿ ಬಸವರಾಜ ಮತ್ತು ಪೂಜಾ ಸಂತೋಷ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.