
ಸಂಜೆವಾಣಿ ವಾರ್ತೆ
ಸೊರಬ.ಜು.೩: ಮಕ್ಕಳಲ್ಲಿ ಬಾಲ್ಯದಲ್ಲೇ ಸಂಸ್ಕಾರಯುತ ನೈತಿಕ ಮೌಲ್ಯಗಳನ್ನು ಬೆಳೆಸಿದಾಗ ಸಮಾಜದಲ್ಲಿ ಉತ್ತಮ ಆದರ್ಶ ಯುತ ಸತ್ಪ್ರಜೆ ಯಾಗಿ ಹೊರಹೊಮ್ಮಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಶಂಕರ್ ಶೇಟ್ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಅಮೋಘ ಕಾರ್ನರ್ ನಲ್ಲಿ ಮಾತೃಶ್ರೀ ನವೋದಯ ಮತ್ತು ಮೊರಾರ್ಜಿ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದು ನವೋದಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಬಾಲ್ಯದಲ್ಲೇ ನೈತಿಕ ಮೌಲ್ಯಗಳ ಜೊತೆಗೆ ಸಂಸ್ಕಾರಯುತ ಗುಣಗಳನ್ನು ಬೆಳೆಸಬೇಕು ಮತ್ತು ಸವಾಲನ್ನು ಎದುರಿಸುವ ಅಂಶಗಳನ್ನು ಮೂಡಿಸಿದಾಗ ನಾಯಕತ್ವವನ್ನು ಹೊಂದಿದ ವ್ಯಕ್ತಿಯಾಗಿ ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದ ಅವರು ವಿದ್ಯಾರ್ಥಿಗಳು ಸಾಧಿಸುವ ಛಲವನ್ನು ಹೊಂದಿರಬೇಕು ಆಹಾರ ಜೀವವನ್ನು ಉಳಿಸಲು ಸಹಕಾರಿಯಾದರೆ ಪುಸ್ತಕ ಜೀವನವನ್ನು ಹೇಗೆ ಸಾಗಿಸಬೇಕು ಹಾಗೂ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಕಲಿಸುತ್ತದೆ. ಜಿಲ್ಲೆಯಲ್ಲಿ ಈ ಸಂಸ್ಥೆಗೆ ಉತ್ತಮವಾದ ಹೆಸರಿದ್ಧು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಈ ಸಂಸ್ಥೆಯಲ್ಲಿ ತರಬೇತಿ ಪಡೆದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತಾಗಲಿ ಎಂದರು.ಸಂಸ್ಥೆಯ ಶಿಕ್ಷಕ ಹಾಗೂ ತರಬೇತುದಾರ ರಮೇಶ್ ಮಾತನಾಡಿ ಮಕ್ಕಳಲ್ಲಿ ಸಾಧಿಸುವ ಛಲದ ಮನೋಭಾವನೆ ಚಿಕ್ಕವಯಸ್ಸಿನಲ್ಲೇ ಬೆಳೆಸಿಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದ ಅವರು ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು ವಿದ್ಯಾರ್ಥಿಗಳು ಉತ್ತುಂಗಕ್ಕೆರಿದಾಗ ನಮ್ಮ ತರಬೇತಿ ಸಂಸ್ಥೆಗೆ ನೀವು ತಂದುಕೊಡುವ ಹಿರಿಮೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿಕ್ಷಕ ರಾಘವೇಂದ್ರ, ಜಾವೇದ್,ಮಂಗಳ ಅರ್ಜುನ್, ಸಾವಿತ್ರಿ, ರಾಮಚಂದ್ರಪ್ಪ, ಪಂಚಾಕ್ಷರಿ ಸೇರಿದಂತೆ ಮೊದಲಾದವರಿದ್ದರು.ಸಹನ ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕ ರಾಘವೇಂದ್ರ ನಿರೂಪಿಸಿದರು,