ಮಕ್ಕಳಲ್ಲಿ ಸಂಗೀತದ ಅಭಿರುಚಿ ಮೂಡಲಿ

ಕಲಬುರಗಿ:ಜ.2:ಸ್ವರ ಮಾತಾ,ಲಯ ಪಿತಾ ಎನ್ನುವ ಹಾಗೆ ಸಂಗೀತವು ನಮ್ಮ ದಿನನಿತ್ಯ ಜೀವನದಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ.ಮತ್ತು ಸಂಗೀತವು ಮನಸಿಗೆ ನೆಮ್ಮದಿ ಆನಂದ ನಿಡುವಂತದು,ಜೊತೆಗೆ ಮಕ್ಕಳಲ್ಲಿ ಸಂಗೀತದ ಅಭಿರುಚಿಯನ್ನು ಬೆಳೆಸಬೇಕು ಇದರಿಂದ ಅವರು ಸಮಾಜದಲ್ಲಿ ಸುಸಂಸ್ಕøತರಾಗಲು ಸಹಾಯಕವಾಗಿದೆ ಎಂದು ಶಾಂತಪ್ಪ ಕೂಡಿ ಹೇಳಿದರು.ಶ್ರೀ ಗುರು ಶರಣಪ್ರಭು ಸಂಗೀತ ಸಾಹಿತ್ಯ ಸಂಸ್ಕೃತಿಕ ಸೇವಾ ಸಂಸ್ಥೆ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನಗರದ ಶ್ರೀ ಎಲ್ಲಮ್ಮ ದೇವಿ ದೇವಸ್ಥಾನ ಗಂಗಾನಗರದಲ್ಲಿ ನಾದನಿನಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅನಿಲ ಏನ್ ಕೂಡಿ,ವಿಜಯಕುಮಾರ ಹದಗಲ,ಅಶೋಕ್ ಬಿದನೂರು,ಸಂತೋಷ ಬೆನ್ನೂರು,ನಾಗೇಂದ್ರ ಎಸ್ ಸಪ್ಪನಗೊಳ ಮುಂತಾದವರು ಉಪ್ಥಿತರಿದ್ದರು.
ನಂತರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನಿಲಕುಮಾರ ಮಠಪತಿ,ಶಿವುಕುಮಾರ ಪಾಟೀಲ್,ಚೇತನ ಬಿದಿಮನಿ,ಸಾಗರ ಭಿಮಳ್ಳಿ,ವಿನೋದ ದಸ್ತಾಪೂರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.