ಮಕ್ಕಳಲ್ಲಿ ಶಿಕ್ಷಣ ಜೊತೆಗೆ ಕಾನೂನಿನ ಅರಿವು ಇರಲಿ : ನಾಡಗೌಡ

ಆಳಂದ:ನ.16:ಮಕ್ಕಳಲ್ಲಿ ಶಿಕ್ಷಣ ಜೊತೆಗೆ ಕಾನೂನಿನ ಅರಿವು ಸಹ ಒಂದು ಮುಖ್ಯ ಪಾಠ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಮ್.ಸಿ.ನಾಡಗೌಡ ಹೇಳಿದರು.

ಪಟ್ಟಣzಲ್ಲಿ À ರವಿವಾರ ್ಲ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗು ನ್ಯಾಯವಾದಿ ಸಂಘ ಆಳಂದ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗು ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಾಲೆಯ ಜೊತೆಗೆ ಕಾನೂನಿನ ಬಗ್ಗೆ ಅರಿವು ಮೂಡು ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಬರಲು ಕಾನೂನು ನೆರವು ಪಡೆಯಲು ಎಲ್ಲರೂ ಪ್ರಯತ್ನ ಪಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವಂತಬಾಯಿ ಹಕ್ಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಅತಿಥಿಗಳಾದ ಚಂದ್ರಕಾಂತ ಪ್ರಧಾನ ಸಿವಿಲ್ ನ್ಯಾಯಾಧೀಶರು, ಜ್ಯೋತಿ ವಿ. ಬಂಧಿ ಸಹಾಯಕ ಸರಕಾರಿ ಅಭಿಯೋಜಕರು ಮಾತನಾಡಿದರು.

ಉಪನ್ಯಾಸ ಎಮ್.ವಿ.ಎಕಬೊಟೆ ನ್ಯಾಯವಾದಿಗಳು ಇವರಿಂದ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ತಿಳಿ ಹೇಳಿದರು.

ನ್ಯಾಯವಾದಿಗಳಾದ ನಾಗೇಶ ರೆಡ್ಡಿ, ಕಮಲಾಕರ ರಾಠೋಡ, ದೇವಾನಂದ , ಎಸ್.ಜಿ. ಬೀಳಗಿ, ಯು.ಕೆ.ಇನಾಮದಾರ, ಕೆ.ಯು. ಇನಾಮದಾರ, ಎಸ್.ಜಿ. ಗಡಬಾಳಿ, ಎಸ್.ಎಸ್. ಗಡಬಾಳಿ. ಬಿ.ವಿ.ಪಾಟೀಲ್ ಸೇರಿದಂತೆ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮ ನಿರೂಪಣೆಯನ್ನು ಎಮ್.ಎಸ್. ಹತ್ತಿ, ವಂದನಾರ್ಪಣೆ ಎಸ್.ಓ.ಮುನ್ನಹಳ್ಳಿ ನಡೆಸಿಕೊಟ್ಟರು.