ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯೊಂದಿಗೆ ಜೀವನ ಮೌಲ್ಯ ಬೆಳೆಸಿ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಫೆ.೨೯: ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯೊಂದಿಗೆ ಜೀವನ ಮೌಲ್ಯ ಬೆಳೆಸಬೇಕು ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು. ನಗರದ ಸರ್ಕಾರಿ ಉನ್ನತೀಕರಿಸಿದ ತರಬೇತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಆಯೋಜಿಸಿದ್ದ ರಾಷ್ಟಿçÃಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದ ಅವರು ವಿಜ್ಞಾನವಿಲ್ಲದೆ ಮನುಷ್ಯನ ಬದುಕೇ ಇಲ್ಲ. ಅದು ನಮ್ಮ ನಿತ್ಯ ಬದುಕಿನಲ್ಲಿ ಜೀವನವನ್ನು ಸುಖಮಯವಾಗಿ ಮಾಡಿದೆ. ನೊಬೆಲ್ ಪ್ರಶಸ್ತಿ ಪಡೆದ ಸಿ.ವಿ.ರಾಮನ್‌ರವರು ಭೌತಶಾಸ್ತçದಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಯಿದ್ದಾಗಲೇ ಬುದ್ದಿವಂತರಿದ್ದ ಅವರು ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು ತಮ್ಮ ಇಡೀ ಜೀವನವನ್ನು ವಿಜ್ಞಾನ ಸಂಶೋಧನೆಗೆ ಮುಡಿಪಾಗಿಟ್ಟರು ಎಂದು ತಿಳಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಮ್ಮ ಬದುಕಿಗೆ ಪೂರಕವಾಗಿ ಬಳಸಿಕೊಳ್ಳಬೇಕು. ಶಿಕ್ಷಕರು ತರಗತಿಯಲ್ಲಿ ಮಕ್ಕಳಿಗೆ ಜ್ಞಾನಾತ್ಮಕ ಬೆಳವಣಿಗೆ ಜೊತೆ ಭಾವನಾತ್ಮಕ ಬೆಳವಣಿಗೆ ಮತ್ತು ಕೌಶಲ್ಯ ವೃದ್ಧಿಪಡಿಸಲು ಸದೃಢಗೊಳಿಸಬೇಕು ಎಂದರು. ವಿಜ್ಞಾನ ವಿಷಯವನ್ನು ಯಾಂತ್ರಿಕವಾಗಿ ಬೋಧಿಸದೆ ಸರಳ ಪ್ರಯೋಗಗಳ ಮೂಲಕ ವಿಷಯದ ಪರಿಕಲ್ಪನೆ ಬೆಳೆಸಿ ಮಕ್ಕಳಲ್ಲಿ ಸಂಶೋಧನಾ ಮನೋಭಾವ ಬೆಳೆಸಬೇಕು. ಇದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನ ವಿಷಯ ಶಿಕ್ಷಕ ಸಂತೋಷ್ ಕುಮಾರ್ ತಮ್ಮ ಪಾಠ ಬೋಧನೆಯಲ್ಲಿ ಪ್ರಯೋಗಾಧಾರಿತ ಚಟುವಟಿಕೆ ಅಳವಡಿಸಿಕೊಂಡು ಬೋಧಿಸುತ್ತಿರುವುದು ಶ್ಲಾಘನೀಯ ಎಂದರು. ಶಿಕ್ಷಕಿ ವಿಜಯಲಕ್ಷ್ಮಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕರಾದ ಸಂತೋಷ್ ಕುಮಾರ್, ಭಾರತಮ್ಮ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.