
ದಾವಣಗೆರೆ. ಮಾ.15; ದೇಶದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿದ್ದು, ಅಶಾಂತಿಯ ವಾತಾವರಣ ಮೂಡುತ್ತಿದೆ. ಮಹಾತ್ಮ ಗಾಂಧಿಜಿಯವರು ಕಂಡ ಅಹಿಂಸಾ ರಾಷ್ಟ್ರ ನಮ್ಮದಾಗಬೇಕಾಗಿದ್ದು ಕೋಮು ಗಲಭೆಗಳು ನಡೆದು ಸಾರ್ವಜನಿಕರ ಆಸ್ತಿಪಾಸ್ತಿಗಳು ನಷ್ಟವಾಗುತ್ತಿವೆ ಮತ್ತು ಸಾವು ನೋವುಗಳು ಸಂಭವಿಸುತ್ತಿವೆ ಈ ಬಗ್ಗೆ ಯುವಕರಿಗೆ ಮಾರ್ಗದರ್ಶನ ನೀಡುವುದು ಅಗತ್ಯ ಎಂದು ಪ್ರೊ. ಹೆಚ್ ಚೆನ್ನಪ್ಪ ಪಲ್ಲಾಗಟ್ಟೆ ತಿಳಿಸಿದರು. ಭಾರತ ಸೇವಾದಳ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮಕ್ಕಳ ಭಾವೈಕ್ಯತ ಮೇಳದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಲಾ ಮಟ್ಟದಲ್ಲೇ ಮಕ್ಕಳಿಗೆ ರಾಷ್ಟ್ರೀಯ ಭಾವನೆ, ಸೇವಾ ಮನೋಭಾವನೆಯನ್ನು ಮೂಡಿಸುವ ಅಗತ್ಯತೆ ಇದ್ದು ಶಾಲಾ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸಲು ಸೇವಾದಳ ಶಿಕ್ಷಣ ಅಗತ್ಯವಾಗಿದೆ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದಾರುಕೇಶರವರು ಸೇವಾದಳ ತರಬೇತಿಗಳನ್ನು ಶ್ಲಾಘಿಸಿ ಸಮಾರೋಪ ಭಾಷಣವನ್ನು ಮಾಡಿದರು.ಎ ಕೆ ಫೌಂಡೇಶನ್ ಅಧ್ಯಕ್ಷರಾದ ಕೆ ಬಿ ಕೊಟ್ರೇಶ್ ಸೇವಾದಳ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುವುದಾಗಿ ತಿಳಿಸಿ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು. ವರದಿಗಾರರ ಕೂಟದ ಅಧ್ಯಕ್ಷರಾದ ಏಕಾಂತಪ್ಪನವರು ಶಿಕ್ಷಕರಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳಾದ ಕೆ ಎಸ್ ಈಶ್ವರಪ್ಪ, ಹುಸೇನ್ ಪೀರ್, ಲೋಕಪ್ಪನವರು, ಸೇವಾದಳದ ತಾಲೂಕ ಅಧ್ಯಕ್ಷ ಆಸ್ಭಾವಿ ಕರಿಬಸಪ್ಪ, ಕೋಶಾಧ್ಯಕ್ಷರಾದ ಎಂ ರುದ್ರಯ್ಯ ಎಸ್ ಎನ್ ರಮೇಶ್, ಬಿ ಜಿ ಚಂದ್ರಶೇಖರ್, ಕೆ ಬಿ ಪರಮೇಶ್ವರಪ್ಪ ಉಮಾ ವೀರಭದ್ರಪ್ಪ, ನೀಲಗುಂದ ಜಯಮ್ಮ ಉಪಸ್ಥಿತರಿದ್ದರು. ವಲಯ ಸಂಘಟಕರಾದ ಅಣ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೇಂದ್ರ ಸಮಿತಿ ಸದಸ್ಯರಾದ ನಾಗರಾಜ್ ಟಿ ರವರು ಗೌರವ ವಂದನೆ ಸ್ವೀಕರಿಸಿ ಸರ್ವರನ್ನು ಸ್ವಾಗತಿಸಿದರು. ಕೆ ಟಿ ಜಯಪ್ಪ ನಿರೂಪಿಸಿದರು, ಜಿಲ್ಲಾ ಕಾರ್ಯದರ್ಶಿ ಅರವಿಂದ್ ಕೂಲಂಬಿ ವಂದಿಸಿದರು.