ಮಕ್ಕಳಲ್ಲಿ ಮಾನಸಿಕ ಖಾಯಿಲೆ ತಡೆಗಟ್ಟಬೇಕು 

ದಾವಣಗೆರೆ.ನ.೨೧; ಮಕ್ಕಳಲ್ಲಿ ಸಂಕಷ್ಟ, ಒತ್ತಡಗಳು ಹೆಚ್ಚಾಗಿ ಹೆದರಿಕೆಯ ಮನೋಭಾವನೆಯಿಂದ ಮಾನಸಿಕ ಖಾಯಿಲೆಗೆ ಮಕ್ಕಳು ತುತ್ತಾಗುತ್ತಿದ್ದಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿಗಳಾದ ಡಾ. ಪಿ. ಡಿ. ಮುರುಳಿಧರ ಅಭಿಪ್ರಾಯಪಟ್ಟರು.ಇಂದು ದಾವಣಗೆರೆಯ ಭಾರತ ಸೇವಾದಳ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದಾವಣಗೆರೆ ಉತ್ತರ, ಹಾಗೂ ಭಾರತ ಸೇವಾದಳ ದಾವಣಗೆರೆ ಇವರ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಮಾನಸಿಕ ಆರೋಗ್ಯ ಮತ್ತು ಜೀವನ ಕೌಶಲ್ಯ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷರಾದ ಪ್ರೊ. ಚನ್ನಪ್ಪ ಎಚ್. ಪಲ್ಲಾಗಟ್ಟೆ ಅವರು ಮಾತನಾಡಿ ಮಕ್ಕಳಲ್ಲಿ ಆತ್ಮಸ್ಟರ್ಯ ತುಂಬುವುದು ಪೋಷಕರ ಮತ್ತು ಶಿಕ್ಷಕರ ಆದ್ಯ ಕರ್ತವ್ಯ ಆಗಬೇಕು ಎಂದರು. ಇಂತಹ ಶಿಬಿರ ನಡೆಸಲು ಸೇವಾದಳ ಯಾವತ್ತು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮನೋ ವೈದ್ಯರಾದ ಡಾ. ಗಂಗಮ್ಮ ಸಿದ್ದರೆಡ್ಡಿ, ಮಾನಸಿಕ ತಜ್ಞ ಸಂತೋಷಕುಮಾರ್, ವಲಯ ಸಂಘಟಕ ಎಂ. ಅಣ್ಣಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಜಿ. ಆರ್. ಮಹಮ್ಮದ್ ಹುಸೇನ್ ರವರು ವಹಿಸಿದ್ದರು.ಜಿಲ್ಲಾ ಕಾರ್ಯದರ್ಶಿ ಸಂತೋಷ ಸ್ವಾಗತಿಸಿದರು. ಪ್ರಸನ್ನ ಕುಮಾರ್ ನಿರೂಪಿಸಿದರು. ಎ. ಆರ್. ಗೋಪಾಲಪ್ಪ ವಂದಿಸಿದರು