ಮಕ್ಕಳಲ್ಲಿ ಮಾನವೀಯ, ನೈತಿಕ ಮೌಲ್ಯ ಬೆಳೆಸಿ : ಡಾ. ಖಾಜಾ ಮೊಯಿನೊದ್ದಿನ್

ಬೀದರ:ಎ.4:ಮಕ್ಕಳಲ್ಲಿ ಮಾನವೀಯ, ನೈತಿಕ ಮೌಲ್ಯ ಬೆಳೆಸಬೇಕು ಎಂದು ಪಾಲಕರಿಗೆ ಕರೆಕೊಟ್ಟ ಡಾ|| ಖಾಜಾ ಮೊಯಿನೊದ್ದಿನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶುಭಕೋರುತ್ತಾ ನಾನು ಓದುವ ಸಂದರ್ಭದಲ್ಲ್ಲಿ ಈ ರೀತಿಯ ಚಟುವಟಿಕೆಗಳು ಇದ್ದಿದಿಲ್ಲ. ಚಿಕ್ಕ-ಚಿಕ್ಕ ಮಕ್ಕಳು ಪದವಿ ಉಡುಪು ಧರಿಸಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮುಗಿಸುತ್ತಿರುವುದು ನನಗೂ ಮತ್ತು ಅವರ ಪೋಷಕರಿಗೂ ಖುಷಿ ತಂದುಕೊಟ್ಟಿದೆ. ನನಗೆ ನನ್ನ ಡಾಕ್ಟ್ರ್ ಪದವಿ ಪಡೆದ ಸಂದರ್ಭ ನೆನಪಾಗುತ್ತಿದೆ ಎಂದರು.

ನಗರದ ನೆಹರು ಕ್ರೀಡಾಂಗಣ ಬಳಿ ಇರುವ ಗುರುನಾನಕ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಡೆದ `ಪದವಿ ದಿನ’ ಸಮಾರಂಭದ ಹಮ್ಮಿಕೊಳ್ಳಲಾಗಿತ್ತು.

ಆಡಳಿತ ಮಂಡಳಿಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಅವರು ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಹಿರಿದಾಗಿದೆ, ಮಕ್ಕಳಿಗೆ ಮಾದರಿಯಾಗುವ ರೀತಿಯಲ್ಲಿ ಪಾಲಕರು ನಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಪದವಿ ದಿನ ಸಮಾರಂಭದಲ್ಲಿ ಪಾಲಕರು, ಮಕ್ಕಳು ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳನ್ನು ಮೊಬೈಲ್‍ನಿಂದ ದೂರ ಇಡಬೇಕು. ಮೊಬೈಲ್ ಮಕ್ಕಳ ಕಲಿಕೆ ಮೇಲೆ, ಸ್ವಭಾವದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು.

ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆರಿಫ್ ಹಾದಿ, ಪ್ರಾಂಶುಪಾಲ ಎನ್.ರಾಜು, ಅಮ್ಜದ್ ಅಲಿ, ಕೋ-ಆರ್ಡಿನೇಟರ್ ಹನುಮಾನ್ ಉಪಸ್ಥಿತರಿದ್ದರು.

ಶಾಲೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆದಿದ್ದರಿಂದ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದರು. ಪಾಲಕರೂ ಪಾಲ್ಗೊಂಡು ತಮ್ಮ ಮಕ್ಕಳಲ್ಲಿನ ಕಲೆ, ಪ್ರತಿಭೆ ಕಂಡು ಖುಷಿಪಟ್ಟರು.

ಸಮಾರಂಭದಲ್ಲಿ ಪೂರ್ವಪ್ರಾಥಮಿಕ ಶಾಲಾ ಮಕ್ಕಳಿಗೆ ಪದವಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ಮತ್ತಿತರ ಸಾಂಸ್ಕøತಿಕ ಚಟುವಟಿಕೆಗಳು ನಡೆದವು. ಸಿಸಿಎ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಪದಕ ನೀಡಿ ಗೌರವಿಸಲಾಯಿತು.