ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ

ರಾಯಚೂರು,ಮೇ.೧೪- ನಗರದ ಕರ್ನಾಟಕ ವೆಲ್ಫೇರ್ ಟ್ರಸ್ಟ್ ಸ್ಕೂಲ್ ಆವರಣದಲ್ಲಿ ಮೈಂಡ್ ಜಿಮ್-೦.೨ ಸಮ್ಮರ್ ಕ್ಯಾಂಪ್‌ನ ೧೪ನೇ ದಿನದ ಕಾರ್ಯಕ್ರಮವನ್ನು ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಮಹೇಶ್ ಮೈದಾರಕರ್ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹೇಶ್ ಮೈದಾರಕರ್ ಈ ತರ ಸಮ್ಮರ್ ಕ್ಯಾಂಪ್ ಮೂಲಕ ಪರಿಸರ ಬಗ್ಗೆ ಮಕ್ಕಳಿಗಾಗಿ ವಿಶೇಷ ಶಿಬಿರಗಳನ್ನು ಏರ್ಪಡಿಸುತ್ತಿರುವುದು ತುಂಬಾ ಒಳ್ಳೆಯ ವಾತಾವರಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ತೋಟಗಾರಿಕೆ ಇಲಾಖೆಯ ತೋಟಗಾರಿಕಾ ಸಹಾಯಕರಾದ ಸುಧಾರಾಣಿರವರು ಮಾತನಾಡಿ ಮಕ್ಕಳಿಗೆ ಗಿಡ ಮರ ಬೆಳೆಸುವ ಹವ್ಯಾಸ ಈ ಬೇಸಿಗೆ ತರಬೇತಿ ಶಿಬಿರದ ಮೂಲಕ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ, ೧೪ನೇ ದಿನದ ಸಮ್ಮರ್ ಕ್ಯಾಂಪ್ ಯಶಸ್ವಿಯಾಗಿ ಸಾಗಲಿ ಎಂದು ಹೇಳಿದರು.
ಮತ್ತೊರ್ವ ಅತಿಥಿಯಾಗಿ ಭಾಗವಹಿಸಿದ ಅರಣ್ಯ ಇಲಾಖೆಯ ಯಲ್ಲಪ್ಪ ಮರ್ಚೆಡ್ ರವರು ಈ ವಯಸ್ಸಿಗೆ ಪರಿಸರ ಬಗ್ಗೆ ಅರಿವು ಮೂಡಿಸಿದರೆ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಆಸಕ್ತಿ ಮಕ್ಕಳಲ್ಲಿ ಬೆಳಸಬಹುದು ಎಂದು ಹೇಳಿದರು.
ಮೈಂಡ್ ಜಿಮ್-೦.೨ ಸಮ್ಮರ್ ಕ್ಯಾಂಪ್ ಏರ್ಪಡಿಸಿದ ದೈಹಿಕ ಶಿಕ್ಷಕರಾದ ಬ್ರಹ್ಮಾನಂದ ರೆಡ್ಡಿ ಮತ್ತು ಈ ಕಾರ್ಯಕ್ರಮದಲ್ಲಿ ೩೫-೪೦ ಕ್ಯಾಂಪ್‌ನ ಶಿಬಿರಾರ್ಥಿಗಳು, ತರಬೇತಿಯ ಶಿಕ್ಷಕರಾದ ಡ್ಯಾನ್ಸ್ ಮಾಸ್ಟರ್ ರಾಜು ಜಾದವ್, ಹಾಗೂ ರೇಷ್ಮಾ ಮೇಡಂ ಮುಂತಾದವರು ಹಾಜರಿದ್ದರು.