ಮಕ್ಕಳಲ್ಲಿ ದೇಶಾಭಿಮಾನ ತುಂಬಿಸಬೇಕು- ಜಯಶ್ರೀ

ಸಿರವಾರ.ಮಾ೨೫- ಮುಂದಿನ ವರ್ಷ ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಕ್ಕೆ ಕಾಲಿಡಿತ್ತಿರುವದರಿಂದ ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕಾಗಿದೆ, ಬಾಲ್ಯದಲ್ಲಿಯೆ ಮಕ್ಕಳಲ್ಲಿ ದೇಶ ಭಕ್ತಿಯನ್ನು ತುಂಬುವ ಕೆಲಸ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರPಣಾ ಆಯೋಗದ ಸದಸ್ಯೆ ಡಾ.ಜಯಶ್ರೀ ಹೇಳಿದರು.
ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಬುಧುವಾರ ಬೇಟಿ ನೀಡಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರವನ್ನು ಮಾಡಿ ಮಾತನಾಡಿದ ಅವರು ದೇಶವು ಮುಂದಿನ ವರ್ಷ ೭೫ ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತದೆ. ಅದನ್ನು ಅರ್ಥ ಪೂರ್ಣವಾಗಿ ಮಾಡಲು ಸರ್ಕಾರ ವರ್ಷ ಆಜಾದಿಕ ಅಮೃತ ಮಹೋತ್ಸವ ಕಾರ್ಯ ಕ್ರಮಗಳನ್ನು ಹಾಕಿಕೊಂಡಿದೆ. ಮಕ್ಕಳಿಗೆ ಸ್ವಾತಂತ್ರದ ಬಗ್ಗೆ ಹಾಗೂ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ತ್ಯಾಗ ಬಲಿದಾನ ಗೈದ ಮಹನೀಯರ ಚಿತ್ರಗಳನ್ನು ಮಕ್ಕಳಿಗೆ ತೋರಿಸಿ ತಿಳಿಸಿ ಹೇಳಬೇಕು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಒಳ್ಳೆಯ eನ ನೀಡಬೇಕು. ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರಗಳನ್ನು ನೀಡಲಾಗುತ್ತಿದ್ದೂ, ಕಾರ್ಯಕರ್ತರು ಮಕ್ಕಳಿಗೆ ನೀಡುವ ಮೂಲಕ ದೇಶಕ್ಕೆ ಬಲಿಷ್ಠ ಮಕ್ಕಳನ್ನು ಕೊಡೆಗೆಯಾಗಿ ನೀಡಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮುದುಕಪ್ಪ ಮಾತನಾಡಿ ಮೂರು ವರ್ಷದ ಬುದ್ದಿ ನೂರು ವರ್ಷದ ವರೆಗೂ ಎನ್ನುವ ನಾಣ್ನುಡಿಯಂತೆ ಅಂಗನವಾಡಿ ಕೇಂದ್ರಗಳಲ್ಲಿಯೆ ಮಕ್ಕಳಿಗೆ ಒಳ್ಳೆಯ ಜ್ಞಾನ ತುಂಬಿದರೆ ಮುಂದೆ ಅವರ ಬುದ್ದ ಶಕ್ತಿ ಹೆಚ್ಚಾಗುತ್ತದೆ. ಇತ್ತರ ಅಭ್ಯಾಸಕ್ಕೂ ಸಹಾಯವಾಗುತ್ತದೆ. ಕಾಟಾಚಾರಕ್ಕೆ ಕೇಂದ್ರಗಳಿಗೆ ಬಂದು ಪೌಷ್ಠಿಕ ಆಹಾರ ನೀಡಿದರೆ ಸಾಲದೂ, ಮಕ್ಕಳಿಗೆ ಚಿತ್ರಗಳನ್ನು ತೊರಿಸುವ ಮೂಲಕ ಅಕ್ಷರ ಜ್ಞಾನ ನೀಡಿ ಎಂದರು.
ಮಾನ್ವಿ -ಸಿರವಾರ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ಅಂಗನವಾಡಿ ಮೇಲ್ವಿಚಾರಕಿ ನಿರ್ಮಲಾ, ಅಂಗನವಾಡಿ ಶಿPಕಿ ವನಿತಾ, ಮಲ್ಲಮ್ಮ ಸೇರಿದಂತೆ ಇತರರು ಇದ್ದರು.