ಮಕ್ಕಳಲ್ಲಿ ಜಾನಪದ ಸಾಹಿತ್ಯ ತಿಳುವಳಿಕೆ ಅಗತ್ಯ-ಎಸ್ ಬಾಲಾಜಿ

ಮಾನ್ವಿ.ಡಿ.೦೭-ಇಂದು ಮಕ್ಕಳಲ್ಲಿ ಜಾನಪದ ತಿಳುವಳಿಕೆ ಅಗತ್ಯ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಜಾನಪದ ಎಸ್. ಬಾಲಾಜಿ ಹೇಳಿದರು.
ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮೂಲ ಕಲಾವಿದರು ರಾಜ್ಯದಲ್ಲಿ ಮೂಲೆ ಗುಂಪಾಗಿದ್ದಾರೆ. ಇದಕ್ಕೆಲ್ಲಾ ಕಾರಣ ನಮ್ಮನ್ನೆಲ್ಲಾ ಆಳುವ ಸರ್ಕಾರಗಳು. ಕಲಾವಿದರಿಗೆ ಸರಿಯಾದ ಸ್ಪಂದನೆ ನೀಡುತ್ತಿಲಗಲ.
ಜಾನಪದ ಸಾಹಿತ್ಯಕ್ಕೆ ರಾಜ್ಯದಲ್ಲಿ ತನ್ನದೆಯಾದ ವಿಶಿಷ್ಟವನ್ನು ಹೊಂದಿದೆ. ಜಾನಪದ ಕಲಾವಿದರು ಲಾಕ್ ಡೌನ್ ಸಮಯದಲ್ಲಿ ಬಹಳಷ್ಟು ತೊಂದರೆಯನ್ನು ಅನುಭವಿಸಿದ್ದಾರೆ ಇಂತವರನ್ನು ಗುರುತಿಸಿ ಪ್ರೋತ್ಸಾಹಧನವನ್ನು ನೀಡಿ ಕಲಾವಿದರಿಗೆ ಗೌರವಿಸಬೇಕು. ರಾಜ್ಯದ ಪ್ರತಿ ಗ್ರಾ. ಪಂಯಲ್ಲಿ ಕಲಾವಿದರನ್ನು ಗುರುತಿಸಬೇಕು ಅವರಿಗೆ ಪ್ರೋತ್ಸಾಹವನ್ನು ಹೆಚ್ಚಿಸಬೇಕು ಎಂದರು. ರಾಜ್ಯದಲ್ಲಿ ಜಾನಪದ ಪರಿಷತ್ ನಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರನ್ನು ಗುರುತಿಸುವಂತ ಕೆಲಸ ಮಾಡಿದೆ ಮುಂದಿನ ದಿನಗಳಲ್ಲಿ ರಾಯಚೂರ ಜಿಲ್ಲೆಯಲ್ಲಿ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕಲಾವಿದರಿಗೆ ಗೌರವಿಸುವಂತ ಕೆಲಸ ಮಾಡಲಾಗುತ್ತದೆ ಎಂದರು.
ನಂತರ ಪ್ರಾಸ್ತಾವಿಕ ಜಾನಪದ ಪರಿಷತ್ ಮಹಿಳಾ ಘಟಕ ಅಧ್ಯಕ್ಷೆ ಕೆ. ವಿಜಯಲಕ್ಷ್ಮಿ ಮಾತನಾಡಿ, ಕರ್ನಾಟಕದಲ್ಲಿ ಜಾನಪದಕ್ಕೆ ಅದರದ್ದೆ ಆದ ಒಂದು ವಿಶಿಷ್ಟ ಸ್ಥಾನವಿದೆ. ನಮ್ಮ ನಾಡಿನ ಯಾವುದೇ ಭಾಗಕ್ಕೆ ಹೋದರೂ ಒಂದಲ್ಲ ಒಂದು ರೀತಿಯಲ್ಲಿ ಜಾನಪದದ ಸೊಗಡು ಇದ್ದೇ ಇದೆ. ಇಂದು ಆಧರೆ ಆಧುನಿಕತೆಯ ಭರಾಟೆಯಲ್ಲಿ ಈ ಜಾನಪದ ತೆರೆಮರೆಗೆ ಸರಿಯುತ್ತಿದೆ. ತೆರೆಮರೆಗೆ ಸರಿಯುತ್ತಿರುವ ನಮ್ಮ ಜಾನಪದನವನ್ನು ಉಳಿಸಲು ಕರ್ನಾಟಕ ಜಾನಪದ ಪರಿಷತ್ ಎಂಬ ಸಂಸ್ಥೆ ಸ್ಥಾಪಿಸಿಕೊಂಡು ಆ ಮೂಲಕ ನಮ್ಮ ಜಾನಪದದ ರಕ್ಷಣೆಗೆ ನಿಂತಿರುವುದು ಶ್ಲಾಘನೀಯ. ನಮ್ಮ ನಾಡಿನಲ್ಲಿ ಜಾನಪದ ಸಂಸ್ಕೃತಿ ಜೀವಂತ ಉಳಿಲಿಕ್ಕೆ ಪ್ರತಿಯೊಬ್ಬರ ಜವಾಬ್ದಾರಿ ಅಗತ್ಯ. ಜಾನಪದ ಎಂದರೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ವಿರುದ್ಧ ಎಂಬ ಭಾವನೆ ಜನರಲ್ಲಿದೆ. ದಾಖಲೀಕರಣದ ಮೂಲಕ ಮುಂದಿನ ಜನಾಂಗಕ್ಕೆ ಕೂಡಿಡುವುದು ಎಂಬ ಸ್ಥಾಪಿತ ತಿಳಿವಳಿಕೆಯ ಚೌಕಟ್ಟಿನ ಆಚೆಗೂ ಜಾನಪದವನ್ನು ವಿಶಾಲ ಮನೋಭಾವದಲ್ಲಿ ಅರ್ಥೆಸಿಕೊಳ್ಳಬೇಕು ಎಂದರು.
ನಂತರ ಹಿರಿಯ ಸಾಹಿತಿ ರಮೇಶ ಬಾಬು ಯಾಳಗಿ ಮಾತನಾಡಿ, ಕ್ರೀಯಾಶೀಲ ವ್ಯಕ್ತಿಯಾಗಿರುವ ಕೆ. ವಿಜಯಲಕ್ಷ್ಮಿಯವರಿಗೆ ಜಾನಪದ ಪರಿಷತ್ ಅಧ್ಯಕ್ಷ ಸ್ಥಾನ ನೀಡಿರುವುದು ತುಂಬಾ ಸಂತೋಷ. ಜಾನಪದ ಸಂಸ್ಕೃತಿ ಮಾನವ ಜನಾಂಗದ ಬೆಳಕು ಹೀಗಾಗಿ ನಾವೆಲ್ಲೂರು ಜಾನಪದ ಸಾಹಿತ್ಯವನ್ನು ಉಳಿಸಿಕೊಂಡು ಪ್ರಯತ್ನ ಮಾಡಬೇಕು ಎಂದರು. ನಂತರ ಜಾನಪದ ಪರಿಷತ್ ತಾಲೂಕಾ ಅಧ್ಯಕ್ಷ ತಾಯಪ್ಪ ಬಿ. ಹೊಸೂರು ಮಾತನಾಡಿದರು.ಈ ವೇದಿಕೆ ಮೇಲೆ ಚೌಡಕಿ ಸೇರಿದಂತೆ ಇನ್ನಿತರ ಜಾನಪದ ಕಲೆಗಳನ್ನು ಪ್ರದರ್ಶಿಸಿದರು.
ಈ ವೇದಿಕೆ ಮೇಲೆ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಗೋನಾಳ, ಕೆ.ಸಿ ಕಾಂತಪ್ಪ ರಾಮನಗರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಾನಮ್ಮ, ಗೌರವಾಧ್ಯಕ್ಷ ನಾಗರತ್ನ ಬಿ. ಪಾಟೀಲ್, ಡಾ. ಅಂಬಿಕಾ ಮಧುಸೂಧನ್, ಪಕ್ಷಿ ಪ್ರೇಮಿ ಸಲ್ಲಾವುದ್ದೀನ್, ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಈ ನರಸಿಂಹ ಸೇರಿದಂತೆ ಅನೇಕರು ಭಾಗವಹಿಸಿದರು.