ಮಕ್ಕಳಲ್ಲಿ ಚುನಾವಣೆಯ ಅರಿವು ಮೂಡಿಸಲು ಶಾಲಾ ಸಂಸತ್ತು ಚುನಾವಣೆ :ಮು.ಗು. ಚನ್ನಾರೆಡ್ಡಿ

ಗುರುಮಠಕಲ್: ಜ.9:ಡೆಕ್ಕನ್ ಶಿಕ್ಷಣ ಸಂಸ್ಥೆ ಪ್ರಗತಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಪ್ರ ಪ್ರಥಮವಾಗಿ ಜನವರಿ 07 ಶನಿವಾರ ದಂದು ನಡೆದ 2022-23 ನೇ ಸಾಲಿನಲ್ಲಿ ನಡೆದ ಶಾಲಾ ಸಂಸತ್ತು ಚುನಾವಣೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ. ಶಾಲಾ ಸಂಸತ್ತು ಚುನಾವಣೆಯನ್ನು ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಉದ್ದೇಶದಿಂದ. ಚುನಾಯಿತ ಅಭ್ಯಾರ್ಥಿಗಳಿಗೆ ನಾಯಕರಾದ ಮೇಲೆ ಅಂತವರಿಗೆ ಯಾವ ಸ್ಥಾನವನ್ನು ಕೊಡಬೇಕು ಚುನಾಯಿತ ಅಭ್ಯಾರ್ಥಿಗಳನ್ನು ಯಾವರೀತಿಯಾಗಿ ನೆಮಕಮಾಡುತ್ತಾರೆ ಅನ್ನುವುದನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಸಂಸತ್ತು ಚುನಾವಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಗುರುಗಳು ಶ್ರೀ ಚನ್ನಾರೆಡ್ಡಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಯವರು ವಿದ್ಯಾರ್ಥಿಗಳು ಹಾಜರಿದ್ದರು.