ಮಕ್ಕಳಲ್ಲಿ ಓದುವ ಸಂಸ್ಕøತಿ ಹೆಚ್ಚಿಸಿ:ಸಂತೋಷ ಬಂಡೆ

ವಿಜಯಪುರ:ಮಾ.2: ಓದುವಿಕೆ ಜ್ಞಾನದ ಪ್ರಮುಖ ಬಾಗಿಲಾಗಿದೆ. ಇಂದು ಪುಸ್ತಕಗಳ ಸ್ಥಾನದಲ್ಲಿ ಡಿಜಿಟಲ್ ಮಾಧ್ಯಮಗಳ ಹಾವಳಿ ಹೆಚ್ಚಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯ ಬೇಕಾದರೆ ಮೊದಲು ಹೆತ್ತವರು ಸ್ವತಃ ಅಂತಹ ಮಾದರಿಯನ್ನು ಜೀವನದಲ್ಲಿ ತೋರ್ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಜಂಬಗಿ(ಆ) ಗ್ರಾಮದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು, ತಾಯಿಯೇ ಮೊದಲ ಗುರು. ಆದ್ದರಿಂದ ಮನೆಯಿಂದಲೇ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಿದಾಗ ಮಾತ್ರ ಅವರಿಂದ ನಾವು ಭವ್ಯ ಭಾರತವನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ಸಾಹಿತಿ ಶ್ರೀದೇವಿ ಉತ್ಲಾಸರ್ ಉದ್ಘಾಟಿಸಿ ಮಾತನಾಡಿ,ನಮ್ಮ ಆಚಾರ,ವಿಚಾರ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪೆÇೀಷಕರು ಮುಂದಾಗಬೇಕು. ಇತ್ತೀಚಿಗೆ ಟಿವಿ ಮತ್ತು ಮೊಬೈಲ್ ಹಾವಳಿಯಿಂದ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿದೆ.ಪೆÇೀಷಕರು ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ ವಿದ್ಯಾಭ್ಯಾಸದ ಕಡೆ ಹೆಚ್ಚು ಆದ್ಯತೆ ನೀಡಲು ಪ್ರೇರೇಪಿಸಬೇಕು ಎಂದು ಹೇಳಿದರು.
ಶಿಕ್ಷಣ ಪ್ರೇಮಿ ಸಿದ್ದು ಗೇರಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ನೀತಿ-ನಿಯಮ, ಆದರ್ಶ, ಶಿಸ್ತು, ಸಂಸ್ಕಾರ, ಮಾನವೀಯ ಗುಣ,ಸದಾಚಾರದಂತಹ ಮೌಲ್ಯಗಳು ರೂಢಿಗತವಾಗುವಂತೆ ಪಾಲಕರು ಗಮನಿಸಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಮಸೂತಿ ಅಧ್ಯಕ್ಷತೆ ವಹಿಸಿದ್ದರು.ಗುರುಬಸಯ್ಯ ಹಿರೇಮಠ,ಸಿದ್ರಾಮಯ್ಯ ಆಲಗೋಡ,ಹಾಜಿಮಲಂಗ ಮುಲ್ಲಾ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತಾ ಹೊನ್ನಳ್ಳಿ, ಬಸವರಾಜ ದೇಶಮುಖ, ಯಲ್ಲವ್ವ ಭಾವಿಮನಿ, ಭೀಮರಾಯ ನಡುಗಡ್ಡೆ,ವಿಜಯಸಿಂಗ್ ರಜಪೂತ, ಪೈಗಂಬರ ಮುಲ್ಲಾ, ದಾವಲಸಾಬ ನದಾಫ್, ಶ್ರೀಶೈಲ ತೊನಶ್ಯಾಳ,ಮಾದೇವ ಮಾಲಗಾರ, ಗಂಗೂಬಾಯಿ ಹಚಡದ, ಸಿದ್ದು ತೋಟದ, ಹಜರತ್ ಪಟೇಲ್ ಬಿರಾದಾರ, ಬಸವರಾಜ ಬುಯ್ಯಾರ,ಶಿಕ್ಷಕರಾದ ನಿಂಗನಗೌಡ ಬಿರಾದಾರ,ಸವಿತಾ ನಂದ್ಯಾಳ, ಮಂಜುನಾಥ ಸಂಕದ,ಅನಿಲ ಸಂಕದ, ಮಂಜುಳಾ ರಾಠೋಡ, ಗೀತಾ ವಾಲಿಕಾರ, ಅರ್ಚನಾ ಕನಮಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು