ಮಕ್ಕಳಲ್ಲಿ ಏಕತೆಯ ಮನೋಭಾವ ಬೆಳೆಸಬೇಕು

ದಾವಣಗೆರೆ. ಸೆ.೧೮; ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಮಕ್ಕಳಲ್ಲಿ ಏಕತೆಯ ಮನೋಭಾವ ಬೆಳೆದರೆ ಮಾತ್ರ ಮುಂದೆ ದೇಶದಲ್ಲಿ ಶಾಂತಿ,ಸೌಹಾರ್ದತೆ, ಸಹೋದರತ್ವ ಬೆಳೆಯುತ್ತದೆ ಎಂದು ಜವಾಹರ್ ಬಾಲ್ ಮಂಚ್ ರಾಜ್ಯಾಧ್ಯಕ್ಷರಾದ ಮೈನುದ್ದೀನ್.ಹೆಚ್.ಜೆ ಅಭಿಪ್ರಾಯ ಪಟ್ಟಿದ್ದಾರೆ.ನಗರದ ಸೀತಮ್ಮ ಪ್ರೌಢಶಾಲೆಯಲ್ಲಿ ವಿವಿಧತೆಯಲ್ಲಿ ಏಕತೆ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗಿನಿಂದಲೇ ಮಕ್ಕಳಿಗೆ ಪಠ್ಯ ಪುಸ್ತಕದ ಅಭ್ಯಾಸದ ಜೊತೆಗೆ ಏಕತೆಯ ಮನೋಭಾವ ಹೆಚ್ಚಿಸುವ ವಿಷಯಗಳ ಬಗ್ಗೆ ಅಭ್ಯಾಸಿಸಬೇಕಿದೆ ಆಗ ಮಾತ್ರ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸು ಮಾಡಬಹುದು ಇಲ್ಲವಾದಲ್ಲಿ ದೇಶ ಪ್ರೇಮದ ಬದಲಾಗಿ ದ್ವೇಷ ಪ್ರೇಮ ಹೆಚ್ಚಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಮಾತನಾಡಿ  ಮಕ್ಕಳಿಗೆ ಪುಸ್ತಕದ ವಿದ್ಯೆ ಜೊತೆ ಜೊತೆಗೆ  ಆತ್ಮಸ್ಥೈರ್ಯ ಹಾಗೂ ಮನೋಬಲ ಹೆಚ್ಚಿಸುವ ಪಠ್ಯೇತರ ಚಟುವಟಿಕೆಗಳು ಆಗಾಗ ನಡೆಸುತ್ತಿದ್ದರೆ ಮಕ್ಕಳ ಬುದ್ಧಿಶಕ್ತಿ ಹಾಗೂ ಎಲ್ಲರೊಂದಿಗೆ ಬೆರೆಯುವ ಮನೋಭಾವ ಬೆಳೆದಂತಾಗುತ್ತದೆ ಆದ್ದರಿಂದ ಪಠ್ಯದ ಕಲಿಕೆ ಜೊತೆಗೆ ಇನ್ನಿತರ ಚಟುವಟಿಕೆಗಳು ಆಗಾಗ್ಗೆ ನಡೆಸುವುದು ಮಕ್ಕಳಿಗೆ ಕಲಿಯುವ ಉತ್ಸಾಹ ಹೆಚ್ಚಿಸುತ್ತದೆ ಅಲ್ಲದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇದರ ಅವಶ್ಯಕತೆ ಹೆಚ್ಚಾಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಇಂಥಾ ಕಾರ್ಯಕ್ರಮಗಳನ್ನು ಬೇರೆ ಬೇರೆ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.