ಮಕ್ಕಳಲ್ಲಿ ಎಳೆ ವಯಸ್ಸಿನಿಂದಲೇ ಸಾಮಾಜಿಕ ಕಾರ್ಯ ಬೆಳೆಯಲಿ

ಔರಾದ :ಜ.8: ಮಕ್ಕಳ ಮನಸ್ಸಿನಲ್ಲಿ ಎಳೆ ವಯಸ್ಸಿನಿಂದಲೇ ಸಾಮಾಜಿಕ ಚಿಂತನೆಗಳು ಹಾಗೂ ಕಾರ್ಯಗಳನ್ನು ಬೆಳೆಯುವಂತೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ ಮಖಸುದ್ ಹೇಳಿದರು.

ತಾಲ್ಲೂಕಿನ ಬೂರ್ಗಿ ಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿರಾಜೋದ್ದಿನ್ ಅವರ ಪುತ್ರ ಸೈಫುಲ್ ಅಜಾನ್ ಪ್ರಥಮ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಮತ್ತು ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಳ್ಳೆಯ ಆಲೋಚನೆ, ಒಳ್ಳೆಯ ಕೆಲಸಗಳು ಮುಂದೆ ಫಲ ಕೊಡುತ್ತವೆ. ಇವತ್ತನ್ನು ನಮ್ಮದಾಗಿ ಮಾಡಿಕೊಳ್ಳಬೇಕು. ಮನಸ್ಸು ಒಳ್ಳೆಯದನ್ನು ಸ್ವಿ?ಕರಿಸಬೇಕು. ಒಳ್ಳೆಯದನ್ನೆ? ಯೋಚಿಸಬೇಕು. ಇದರಿಂದ ಭವಿಷ್ಯವೂ ಒಳ್ಳೆಯದಾಗುತ್ತದೆ. ಹೆತ್ತವರು ನಮಗೆ ಏನು ಕೊಟ್ಟರು ಎಂಬುದು ಮುಖ್ಯವಲ್ಲ. ದೊಡ್ಡವರಾದ ಮೇಲೆ ನಾವು ಹೆತ್ತವರಿಗೆ ಮತ್ತು ಸಮಾಜಕ್ಕೆ ಏನು ಕೊಡುಗೆ ನೀಡಿದೆವು ಎಂಬುದೇ ಮುಖ್ಯ ಎಂದರು.

ಸಂಪನ್ಮೂಲ ಶಿಕ್ಷಕ ಮುತ್ತಣ್ಣ ರಂಡ್ಯಾಳೆ ಮಾತನಾಡಿ, ಮಕ್ಕಳನ್ನು ಪಠ್ಯಕ್ಕೆ ಸೀಮಿತಗೊಳಿಸದೆ ಸಾಮಾಜಿಕ ಚಿಂತನೆಯ ಮನೋಭಾವ ಅವರಲ್ಲಿ ಬೆಳೆಯುವಂತೆ ಮುಕ್ತ ವಾತಾವರಣ ಕಲ್ಪಿಸಬೇಕು ಸೈಫುಲ್ ಅಜಾನ್ ಅವರ ಹುಟ್ಟು ಹಬ್ಬದಂದೆ ಎಲ್ಲಾ ವಿಧ್ಯಾರ್ಥಿಗಳು ಸಮಾಜಮುಖಿಯಾಗಿ ಆಚರಣೆಗೆ ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಜೈಪ್ರಕಾಶ ಅಷ್ಟೂರೆ, ಶಾಲೆಯ ಮುಖ್ಯ ಶಿಕ್ಷಕ ಸಲಿಮ, ಎಸ್ಡಿಎಂಸಿ ಅಧ್ಯಕ್ಷ ರಾಜಕುಮಾರ ಪಂಚಾಳ, ರಾಜಕುಮಾರ ಶೇರಿಕಾರ್, ಮುಕ್ತಪ್ಪ ಸಿರಾಜೋದ್ದಿನ್, ಪರಿಸರ ಪ್ರೇಮಿ ರಿಯಾಜಪಾಶಾ ಕೊಳ್ಳೂರ, ಪತ್ರಕರ್ತ ಸಾದುರೆ ಶಿವಕುಮಾರ್, ಆಯಾಜಪಾಶಾ, ಜಮಿರೋದ್ದಿನ್, ಪ್ರಕಾಶ್ ರಾಜೋಳೆ, ಅಂಬಿಕಾ, ಜೈಶೀಲಾ ಇದ್ದರು.