ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಗುರುತಿಸಿ, ನಿಯಂತ್ರಿಸಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ನ.೫; ಮಕ್ಕಳಲ್ಲಿ ಅಪೌಷ್ಠಿಕತೆ ಮತ್ತು ರಕ್ತಹೀನತೆ ಗುರುತಿಸಿ, ಸಮುದಾಯದಲ್ಲಿ ನಿಯಂತ್ರಿಸುವ ಜವಾಬ್ದಾರಿ ಸಮುದಾಯ ಆರೋಗ್ಯಾಧಿಕಾರಿಗಳು ಮಾಡಬೇಕು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಸೂಚನೆ ನೀಡಿದರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈಚೆಗೆ ಮಕ್ಕಳ ಸುಧಾರಿತ ಪೌಷ್ಠಿಕತೆಗಾಗಿ ಆರೋಗ್ಯ ಪ್ರಕ್ರಿಯೆ 𝚌𝚑𝚒𝚕𝚍 𝚑𝚎𝚊𝚕𝚝𝚑 𝚊𝚌𝚝𝚒𝚘𝚗 𝚏𝚘𝚛 𝚒𝚖𝚙𝚛𝚘𝚟𝚎𝚍 𝚗𝚞𝚝𝚛𝚒𝚝𝚒𝚘𝚗 ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರದ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ಆರು ವರ್ಷದ ಒಳಗಿನ ಮಕ್ಕಳಿಗೆ ಸಾಂಸ್ಥಿಕ ಹಾಗೂ ಸಮುದಾಯ ಮಟ್ಟದಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಆರೈಕೆ ಮತ್ತು ಚಿಕಿತ್ಸೆ ಪೌಷ್ಟಿಕ ಪುನಶ್ಚೇತನ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸಮುದಾಯ ಆರೋಗ್ಯ ಅಧಿಕಾರಿಗಳ ಸೇವೆಗಳೊಂದಿಗೆ ಬಲಪಡಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ ಎಂದರು.ಸಮುದಾಯದಲ್ಲಿ ಗೃಹ ಆಧಾರಿತ ಪೌಷ್ಟಿಕ ಆಹಾರದಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವುದು ಮಕ್ಕಳಲ್ಲಿನ ಸಾಧಾರಣ ಹಾಗೂ ತೀವ್ರ ಅಪೌಷ್ಟಿಕತೆಯನ್ನು ತ್ವರಿತವಾಗಿ ಗುರುತಿಸುವುದು ಹಾಗೂ ಅರ್ಹ ಮಕ್ಕಳನ್ನ ಪೌಷ್ಟಿಕ ಪುನಶ್ಚೇತನ ಕೇಂದ್ರಗಳಿಗೆ ನಿರ್ದೇಶಿಸುವುದು ಇದರ ಮೂಲಕ ಮಕ್ಕಳ ಮರಣ ದರವನ್ನು ನಿಯಂತ್ರಿಸಬೇಕು ಎಂದು ಹೇಳಿದರು.ತಾಲ್ಲೂಕು ಅರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಪೌಷ್ಟಿಕ ಪುನಶ್ವೇತನ ಕೇಂದ್ರಗಳಿಂದ ಬಿಡುಗಡೆಗೊಂಡ ಮಕ್ಕಳಿಗೆ ಮರು ಭೇಟಿ ಸೇವೆಗಳನ್ನ ಬಲಪಡಿಸಿ ಮಕ್ಕಳಲ್ಲಿ ಹದಿಹರೆಯದವರಲ್ಲಿ ಗರ್ಭಿಣಿ ಸ್ತ್ರೀಯರಲ್ಲಿ ಬಾಣಂತಿಯರಲ್ಲಿ ಸಂತಾನೋತ್ಪತ್ತಿ ವಯೋಮಾನದ ಮಹಿಳೆಯರಲ್ಲಿ ರಕ್ತ ಹೀನತೆ ತಪಾಸಣೆ ಹಾಗೂ ಸೂಚಿಸಲಾಗಿರುವ ಚಿಕಿತ್ಸೆಯನ್ನು ನೀಡುವಿಕೆ, ಮೇಲ್ವಿಚಾರಣ ದಾಖಲಾತಿ ಹಾಗೂ ವರದಿ ಮಾಡುವುದು ಸಮುದಾಯ ಆರೋಗ್ಯಾಧಿಕಾರಿಗಳ ಮುಖ್ಯ ಕರ್ತವ್ಯವಾಗಿದೆ ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್ ಮಾತನಾಡಿ, ಆಹಾರಗಳು, ಪೆÇೀಷಕಾಂಶಗಳು ಮತ್ತು ಅವುಗಳನ್ನು ಒಳಗೊಂಡಿರುವ ಇತರೆ ಪದಾರ್ಥಗಳ  ವಿಜ್ಞಾನವೇ ಪೌಷ್ಟಿಕಾಂಶ. ಇμÉ್ಟೀ ಅಲ್ಲದೆ ಆಹಾರ ಸೇವನೆಯ ಜೀರ್ಣಕ್ರಿಯೆ ಹೀರಿಕೊಳ್ಳುವಿಕೆ ಪಚನಾ ಮತ್ತು ವಿಸರ್ಜನೆ ಇವುಗಳನ್ನ ಒಳಗೊಂಡಂತೆ ದೇಹದ ಒಳಗಿನ ಕ್ರಿಯೆಗಳ ವಿಜ್ಞಾನ ಎಂದು ತಿಳಿಸಿದರು.ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ ಆರ್ ಗೌರಮ್ಮ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪೌಷ್ಟಿಕಾಂಶ ಮತ್ತು ಸಮತೋಲಿತ ಆಹಾರ ಇವುಗಳ ನಡುವಿನ ವ್ಯತ್ಯಾಸ ತಿಳಿಸಿದರು.ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವ ಸಾಧಾರಣ ಅಪೌಷ್ಟಿಕತೆ, ತೀವ್ರ ಅಪೌಷ್ಟಿಕತೆ, ಕುಂಟಿತ ಬೆಳವಣಿಗೆ ಮಾಪನಗಳನ್ನ ಹೇಗೆ ಮಾಡಬೇಕು. ಸಮುದಾಯದಲ್ಲಿ ಅಪೌಷ್ಟಿಕ ಮಕ್ಕಳ ಪತ್ತೆ ಹಚ್ಚುವಿಕೆ ಇರುವಂತಹಗಳು ಅವಕಾಶಗಳನ್ನ ಸದುಪಯೋಗಪಡಿಸಿಕೊಳ್ಳಲು ಅಪೌಷ್ಟಿಕ ಮಕ್ಕಳ ಪಟ್ಟಿಯನ್ನು ಮಾಡಿ  ಚೈನ್ ವಿಧಾನದಲ್ಲಿ ಮಕ್ಕಳ ಆಹಾರ ಅನುಕ್ರಮಗಳನ್ನ ಹೇಗೆ ಸಿದ್ಧಪಡಿಸಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು.ತರಬೇತಿ ಕಾರ್ಯಗಾರದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ,  ಜಾನಕಿ, ಮುಖ್ಯ ಆರೋಗ್ಯ ಮೇಲ್ವಿಚಾರಣ ಅಧಿಕಾರಿ ಎಂ.ಬಿ.ಹನುಮಂತಪ್ಪ ಸೇರಿದಂತೆ 80 ಜನ ಸಮುದಾಯ ಆರೋಗ್ಯ ಅಧಿಕಾರಿಗಳು ಇದ್ದರು.