ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಕಲೆಗಳು ಹೊರಗೆ ಬರಬೇಕು: ಡಿ. ಎಮ್.ಹೊಸಮನಿ

ಗುರಮಠಕಲ್ :ಮಾ.2: ಸಮೀಪದ ಗೋಪಾಳಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ ಜಿಲ್ಲೆಯ ಲನಿರ್ಂಗ್ ಲಿಂಕ್ ಫೌಂಡೇಶನ್ ಹಾಗೂ ಡೇಲ್ ಟೆಕ್ನಾಲಜಿ ಕಂಪನಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ಮಕ್ಕಳ ಕಲಿಕಾ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಯಾದಗಿರಿ ಡಯಟ್ ನ ಪ್ರಭಾರಿ ಪ್ರಾಚಾರ್ಯರಾದ ಡಿ.ಎಮ್. ಹೊಸಮನಿ ಅವರು ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ಸ್ವಂತ ಅನುಭವದಿಂದ ತಯಾರಿಸಿದ ವಿಜ್ಞಾನದ ಮಾದರಿಗಳು, ವೈಜ್ಞಾನಿಕ ಯಂತ್ರೋಪಕರಣಗಳು ಮತ್ತು ಪ್ರಾಕೃತಿಕ ಸೌಂದರ್ಯ ಚಿತ್ರಗಳು ಜೊತೆಗೆ ತಂತ್ರಜ್ಞಾನದ ಪ್ರಭಾವದಿಂದ ವಿಶಿಷ್ಟವಾದ ಪರಿಕರಗಳನ್ನು ತಯಾರಿಸಿ ಅವುಗಳ ಪ್ರಾಮುಖ್ಯತೆಗಳ ಬಗ್ಗೆ ಮಕ್ಕಳು ವಿವರಿಸಿದಾಗ ಮಕ್ಕಳ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಮುಂದಿನ ದಿನಗಳಲ್ಲಿ ಇನ್ನುಳಿದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ಇಂತಹ ವೇದಿಕೆಗಳು ಕಲ್ಪಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಕಲೆಗಳು ಹೊರ ಜಗತ್ತಿನ ಪರಿಚಯಿಸುವ ಕಾರ್ಯ ಹೆಚ್ಚು ಹೆಚ್ಚು ಆಗಬೇಕು ಎಂದು ಎನ್ ಜಿ ಓ ಮುಖ್ಯಸ್ಥರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಲ್ಲಿಕಾರ್ಜುನ ಪೂಜಾರಿ ಅವರು ನಮ್ಮ ಯಾದಗಿರಿ ತಾಲೂಕಿನ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಅನೇಕ ಎನ್. ಜಿ. ಓ ಕಾರ್ಯ ನಿರ್ವಹಿಸುತ್ತವೆ. ಈ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಕ್ಕಳು ಮಾಡಿದ ವಿಜ್ಞಾನದ ಮಾದರಿಗಳು ವೀಕ್ಷಿಸಿ , ಮಕ್ಕಳೊಂದಿಗೆ ಹಲವು ಅಂಶಗಳು ಬಗ್ಗೆ ಚರ್ಚಿಸಿದಾಗ ಮಕ್ಕಳು ಸಕಾರಾತ್ಮಕವಾಗಿ ವಿವರಿಸಿದ್ದು ನೋಡಿ ಇದಕ್ಕೆ ಕಾರಣ ಶಾಲಾ ಮುಖ್ಯ ಗುರುಗಳು ಸಹ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರು ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಯಟ್ ನ ಹಿರಿಯ ಉಪನ್ಯಾಸಕರಾದ ಚೆನ್ನಪ್ಪ ಅವರು ಮಾತನಾಡಿ ಮಕ್ಕಳಲ್ಲಿ ಅಡಗಿರುವ ವೈಜ್ಞಾನಿಕ ಕಲೆಯನ್ನು ಈ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮೂಲಕ ಹೊರಹಾಕಲು ಅವಕಾಶ ಕಲ್ಪಿಸಿಕೊಟ್ಟ ಲನಿರ್ಂಗ್ ಲಿಂಕ್ ಫೌಂಡೇಶನ್ ಹಾಗೂ ಡೇಲ್ ಟೆಕ್ನಾಲಜಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.

ಕಂದಕೂರ ಕ್ಲಸ್ಟರ ಸಂಪನ್ಮೂಲ ವ್ಯಕ್ತಿಗಳಾದ ಶ ಬಸವರಾಜೇಶ್ವರಿ ಇವರು ಮಾತನಾಡಿ ಗೋಪಾಳಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಕಂದಕೂರ ಕುವೆಂಪು ಶಾಲಾ ಮಕ್ಕಳು ವಿವಿಧ ಸೃಜನಾತ್ಮಕ ಆಕೃತಿಗಳನ್ನು ತಯಾರಿಸಿ ವಿವರಿಸುತ್ತಿರುವ ಅಂಶವನ್ನು ನೋಡಿದಾಗ ಮಕ್ಕಳಲ್ಲಿ ನಿಜವಾದ ಕಲಿಕೆ ಆಗಿದೆ ಅದರಲ್ಲೂ ಚಿತ್ರಕಲೆ,ಬಲೂನ್ ಕಾರ್ , ನೆಟ್ವರ್ಕ್ ಟಾವರ ನಿರ್ಮಾಣ ಜೊತೆಗೆ ಇತ್ಯಾದಿ ಸ್ಪರ್ಧೆಗಳು ಆಯೋಜಿಸಿ ನಂತರ ಅದರಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳು ಮತ್ತು ನೆನಪಿನ ಕಾಣಿಕೆಯನ್ನು ನೀಡಲಾಯಿತು,ಇಂತಹ ಅನುಭವಾತ್ಮಕವಾದ ಜ್ಞಾನವನ್ನು ಕಟ್ಟಿಕೊಂಡಿದ್ದಾರೆ ಎಂದರು ಶಿಕ್ಷಕರು ಮಾಡಿರುವ ಕಾರ್ಯ ಪ್ರಶಂಸಿ ಜೊತೆಗೆ ಮಕ್ಕಳಿಗೆ ಪೆÇ್ರೀತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಲನಿರ್ಂಗ್ ಲಿಂಕ್ ಫೌಂಡೇಶನ್ ಮ್ಯಾನೇಜರ್ ಆದ ಬಸವಂತ್ರಾಯ ಪಾಟೀಲ ಮಾತನಾಡಿ ಸಂಸ್ಥೆಯ ಸಂಕ್ಷಿಪ್ತ ಪರಿಚಯ ಜೊತೆಗೆ ಈ ಮೇಳದ ಉದ್ದೇಶ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಂ ಪಂಚಾಯತ್ ಸದಸ್ಯರಾದ ಆನಂದ ಭಜಂತ್ರಿ ಮಾತನಾಡಿ ನಮ್ಮ ಗೋಪಾಳಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂತಹ ವೈಜ್ಞಾನಿಕವಾದ ಕಾರ್ಯಕ್ರಮ ಮಾಡಿರುವ ತಮ್ಮ ಕಾರ್ಯ ಅದಕ್ಕೆ ಸ್ಪೂರ್ತಿ ಎಂಬಂತೆ ಶಾಲಾ ಮುಖ್ಯ ಗುರುಗಳಾದ ಶೇಖಅಲಿ ಖಾನ್ ಅವರ ಕಾರ್ಯ ನಾವು ಎಂದಿಗೂ ಮರೆಯುವುದಿಲ್ಲ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಆಯೋಜಿಸುವ ಉದ್ದೇಶ ಇದ್ದಲ್ಲಿ ನಮ್ಮದು ಸಂಪೂರ್ಣ ಬೆಂಬಲ ಇರುತ್ತದೆ ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಶೇಖ ಅಲಿ ಖಾನ್ ಮಕ್ಕಳಿಗೆ ವಿಜ್ಞಾನ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಯಾದಗಿರಿ ಡೇಲ್ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ್ ಕುಮಾರ್, ಶಾಲಾ ಶಿಕ್ಷಕರಾದ ಶಿವಲಿಂಗಪ್ಪ, ಬಂಗಾರೆಪ್ಪ ಹಾಗೂ ಅತಿಥಿ ಶಿಕ್ಷಕರು , ಕುವೆಂಪು ಪ್ರಾಥಮಿಕ ಶಾಲೆ ಕಂದಕೂರ ಶಾಲಾ ಮುಖ್ಯ ಗುರುಗಳಾದ ಗುಂಜಲಪ್ಪ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಗೋಪಾಳಪೂರ ಶಾಲಾ ಎಸ್ ಡಿ ಎಮ್ ಸಿ ಸಮಿತಿ ಅಧ್ಯಕ್ಷರಾದ ಮೌನೇಶ ವಿಶ್ವಕರ್ಮ, ಮತ್ತು ಸದಸ್ಯರು,ಊರಿನ ಗಣ್ಯರು ,ಗ್ರಾಂ ಪಂಚಾಯತ್ ಸದಸ್ಯರು,ಪಾಲಕ ಪೆÇೀಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕರಾದ ಗುರುನಾಥ್ ಮಲ್ಲಿಗೆವಾಡ ನಿರೂಪಿಸಿ ವಂದಿಸಿದರು.