ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವುದೇ ಪ್ರತಿಭಾಕಾರಂಜಿ


ಸಂಜೆವಾಣಿ ವಾರ್ತೆ
ಕುರುಗೋಡು.ಸೆ.22 ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವುದೇ ಪ್ರತಿಭಾಕಾರಂಜಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿಜಿಲ್ಲಾದ್ಯಕ್ಷ ಸಿ.ನಿಂಗಪ್ಪ ಅಭಿಮತವ್ಯಕ್ತಪಡಿಸಿದರು.
ಅವರು ಬುಧವಾರ ಪಟ್ಟಣದ ಸರ್ಕಾರಿ ಶಾಸಕರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕುರುಗೋಡು ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು, ಮತ್ತು ಶಾಲಾಶಿಕ್ಷಕರು ಸಹ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹನೀಡಬೇಕೆಂದು ಸಲಹೆ ನೀಡಿದರು.
ಅನುದಾನ ರಹಿತ ಕುರುಗೋಡು ತಾಲೂಕು ಶಾಲಾ ಒಕ್ಕೂಟ [ಕುಸ್ಮಾ] ಅದ್ಯಕ್ಷ ವಿಎಸ್.ಚಕ್ರವರ್ತಿ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿಭೆ ಯಾರಸೊತ್ತಲ್ಲ. ಅದು ತಾನಾಗಿಯೇ ಹೊರಸೂಸುವ ಒಂದು ಕಲೆ ಎಂದು ನುಡಿದರು. ಮಾತ್ರವಲ್ಲದೆ ಕುರುಗೋಡು ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿವಿದ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಬಾಗವಹಿಸಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಸರ್ಕಾರಿ ನೌಕರಸಂಘದ ಕುರುಗೋಡ ತಾಲೂಕು ಅದ್ಯಕ್ಷ ಗುಮಡಪ್ಪನವರ ನಾಗರಾಜ್, ಕುರುಗೋಡು ಸಿಆರ್‍ಪಿ.ಷಣ್ಮುಖಪ್ಪ ಮಾತನಾಡಿದರು. ಮಾದರಿಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಲಕ್ಷಿಚಕ್ರವರ್ತಿ,  ಎಸ್‍ಡಿಎಂಸಿ ಅದ್ಯಕ್ಷ ರಾಜಶೇಖರ, ಕಸಾಪ. ತಾಲೂಕು ಅದ್ಯಕ್ಷ ನಾಗರಾಜಮಸೂತಿ, ಪ್ರಾ.ಶಾಲಾಶಿಕ್ಷಕರ ಸಂಘದ ತಾಲೂಕು ಅದ್ಯಕ್ಷ ತುಕಾರಾಂಗೊರವ, ಸೇರಿದಂತೆ ಪ್ರಾ.ಶಾ. ಶಿಕ್ಷಕರ ಸಂಘದ ಎಲ್ಲಾ ಪದಾದಿಕಾರಿಗಳು, ಕುಸ್ಮಾ ಸಂಸ್ಥೆಯ ಬಿಎಂ.ಜಡಿಸ್ವಾಮಿ, ಬಿ.ಚಂದ್ರಶೇಖರ, ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಮುಖ್ಯಗುರು, ಎಸ್‍ಡಿಎಂಸಿ ಉಪಾದ್ಯಕ್ಷ, ಸದಸ್ಯರು, ಶಿಕ್ಷಕರು, ಶಿಕ್ಷಕಿಯರು ನೂರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ವಿವಿದ ಶಾಲಾ ವಿದ್ಯಾರ್ಥಿಗಳಿಂದ ಛದ್ಮವೇಶ, ಅಭಿನಯಗೀತೆ, ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಚಿತ್ರಕಲೆ, ಆಶುಭಾಷಣ, ಸೇರಿದಂತೆ ಇತರೆ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಪ್ರತಿಭಾಕಾರಂಜಿ ಸ್ಪರ್ದೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕುರುಗೋಡು ತಾಲೂಕು ಜನಪದ ಅಕಾಡೆಮಿ ಅದ್ಯಕ್ಷ ಚಾನಾಳು ಅಂಬರೇಷ್ ರೂ.5000 ಗಳನ್ನು ನೀಡಿದರು. ಇದೇ ಮಾದರಿಯಲ್ಲಿ ಕುಸ್ಮಾ ಸಂಸ್ಥೆಯಿಂದ ಸಹ ವಿಜೇತಮಕ್ಕಳಿಗೆ ರೂ.5000ಗಳನ್ನು ನೀಡಿದರು. ಮತ್ತು ನೌಕರಸಂಘದ ಅದ್ಯಕ್ಷ ಗುಂಡಪ್ಪನವರ ನಾಗರಾಜ್ ರೂ.3500 ಗಳನ್ನು ಪ್ರೋತ್ಸಾಹಕವಾಗಿ ನೀಡಿದರು. ಸ್ವಾಗತವನ್ನು ಶಿಕ್ಷಕಿ ಮಲ್ಲಮ್ಮ ನೆರವೇರಿಸಿದರು. ಶಿಕ್ಷಕ ಶಫಿ ವಂದಿಸಿದರು.