ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲಿ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.23: ಇಂದಿನ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸುವದರ ಜತೆಗೆ ಮಕ್ಕಳ ಆಸಕ್ತಿ, ಅಭಿರುಚಿ ಮತ್ತು ಕಲಿಕಾ ಸಾಮಥ್ರ್ಯ ಗುರುತಿಸಿ, ಅವರಲ್ಲಿರುವ ಪ್ರತಿಭೆ, ಕಲೆ, ಕೌಶಲ್ಯ ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ವಿಭಿನ್ನ ಚಿಂತನಾಶಕ್ತಿಯನ್ನು ಅಭಿವ್ಯಕ್ತಿಗೊಳಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವದು ಅವಶ್ಯಕವಾಗಿದೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಜಾವೇದ ಜಮಾದಾರ ಅಭಿಪ್ರಾಯಪಟ್ಟರು. ನಗರದ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ವಿದ್ಯಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇನ್ನೊರ್ವ ಅತಿಥಿ ಡಾ.ಅಫಾಕ್ ಇನಾಮದಾರ ಮಾತನಾಡಿ, ವಿಜ್ಞಾನ ಮಾದರಿ ತಯಾರಿಕೆ, ಹೊಸ ಅವಿಷ್ಕಾರ, ಸಂಶೋಧನಾತ್ಮಕ ಸೃಜನಾತ್ಮಕತೆಯನ್ನು ಪಡೆಯಲು ಪೂರಕ ಶೈಕ್ಷಣಿಕ ವಾತಾವರಣ ಶಾಲೆಯಲ್ಲಿ ನಿರ್ಮಿಸುವುದು ಇಂದಿನ ಅಗತ್ಯತೆಯಾಗಿದೆ ಎಂದರು.
ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ರಾಹುಲ್ ಪೋಳ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಮರ್ಥ ಖೊದ್ನಾಪೂರ ಈತನಿಗೆ ಕ್ರಿಯೇಟಿವ್ಹ ಚೈಲ್ಡ್ ಎಂದು ನಗದು ಹಣ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಸಮಾರಂಭದಲ್ಲಿ ಸಂಸ್ಥೆಯ ಸಲೀಂ ಬದಾಮಿ, ಶಾಲೆಯ ಮುಖ್ಯೋಪಾಧ್ಯಾಯರಾದ ದಿಲಶಾದ್ ಬದಾಮಿ, ಸನಾಕೌಸರ್, ಮುಸ್ಕಾನ್, ತಸ್ಲೀಂ, ಡಿ.ಎಂ. ಅನಿತಾ ಹಾಗೂ ಸರೋಜಿನಿ ಹಾಗೂ ದಾನಮ್ಮ ಇತರರು ಉಪಸ್ಥಿತರಿದ್ದರು.