ಭಾಲ್ಕಿ:ಸೆ.21: ಪುಟಾಣಿ ಮಕ್ಕಳಲ್ಲಿರುವ ಸುಪ್ತಿ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಸುಂಟೆ ಅಭಿಪ್ರಾಯಪಟ್ಟರು.
ಪಟ್ಟಣದ ಮದಕಟ್ಟಿ ಗ್ರಾಮದ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಮಕ್ಕಳಲ್ಲಿಯ ಅಸಾಮಾನ್ಯ ಪ್ರತಿಭೆಯನ್ನು ಅರಳಿಸುವ ಕಾರ್ಯಕ್ಕಾಗಿ ಪ್ರತಿ ಕ್ಲಸ್ಟರ್ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೇಗಳನ್ನು ಏರ್ಪಡಿಸಿದೆ. ಪುಟಾಣಿ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಬೀದರಿನ ಬಿ.ಇಡಿ ಉಪನ್ಯಾಸಕ ಮಹೇಶ ಸಜ್ಜನ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಸಿಆರ್‍ಪಿ ಅಶೋಕಕುಮಾರ ಕಲ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನಭಾರತಿ ಶಿಕ್ಷಣ ಸಂಸ್ಥೆಂiÀ ಅಧ್ಯಕ್ಷರೂ ಆದ ಮುಖ್ಯ ಶಿಕ್ಷಕ ಸಂತೋಷ ಭಾಲ್ಕೆ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಮಿರಸದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಕುಂಬಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಾಂಬಳೆ, ಸಿಆರ್‍ಪಿ ಭುವನೇಶ್ವರ ಬಿರಾದಾರ, ಸಂತೋಷ.ಡಿ, ಪವನ ಮೇತ್ರೆ, ಸಂತೋಷ ವಾಡೆ, ಸಾಯಮ್ಮ, ಬಿಆರ್‍ಪಿ ಆನಂದ ಹಳೆಂಬರೆ, ಬಸವರಾಜ ದಾನಾ ಮುಖ್ಯಗುರು ಅಶೋಕ ಬರ್ಮಾ ಮತ್ತಿತರರು ಇದ್ದರು.
ಅಶೋಕ ಕುಮಾರ ಸ್ವಾಗತಿಸಿದರು. ಬಸವರಾಜ ನಿರೂಪಿಸಿದರು. ಸಂತೋಷ ವಂದಿಸಿದರು.