ಮಕ್ಕಳಲ್ಲಿಯ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಾಂಜಿ ಸ್ಪೂರ್ತಿ:ಗೋಟೂರ

ತಾಳಿಕೋಟೆ:ಸೆ.16: ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವಂತಹ ಕೆಲಸ ಸರ್ಕಾರ ಮಾಡಿದೆ ಇಂತಹ ವೇದಿಕೆಯಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲಿ ಯಾವುದೇ ಅಂಜಿಕೆ ಭಯವೆಂಬುದು ಮಕ್ಕಳಲ್ಲಿ ಬರುವದು ಬೇಡಾವೆಂದು ತಾಲೂಕಾ ತಹಶಿಲ್ದಾರ ಶ್ರೀಧರ ಗೋಟೂರ ಅವರು ನುಡಿದರು.
ಗುರುವಾರರಂದು ಪಟ್ಟಣದ ವ್ಹಿ.ಕೆ.ಎಚ್.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವಿಜಯಪೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯ ಅಧಿಕಾರಿಗಳ ಇಲಾಖೆ ಇವರ ಸಹಯೋಗದಲ್ಲಿ ನಡೆದ ತಾಳಿಕೋಟೆ ಕ್ಲಸ್ಟರ್ ಮಟ್ಟದ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕಳೆದ ಮೂರು ವರ್ಷಗಳಿಂದ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಕೊರೊನಾ ಕಾರಣದಿಂದ ನಡೆಸಲಾಗಿದ್ದಿಲ್ಲಾ ಆದರೆ ಇದೀಗ ಶಾಲಾ ಚಟುವಟಿಕೆಗಳು ಮತ್ತೆ ಮೈದೇಳಿ ಕಲರವ ಮೂಡಿಸುತ್ತಿವೆ. ಪಠ್ಯೇತರ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿವೆ. ಮಕ್ಕಳಲ್ಲಿ ಅಡಗಿರುವ ಪ್ರತಿಭಾ ಶಕ್ತಿ ಅರಳಿಸಬೇಕು. ಯಾವ ಕಾರಣಕ್ಕೂ ಅವು ಕಣ್ಮರೆಯಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು. ಇಲ್ಲಿ ಬಹು ಸುಂದರವಾಗಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿರುವುದು ತಮಗೆ ಸಂತಸ ತಂದಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ ಅವರು ಮಾತನಾಡಿ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳು ಹೊರಚೆಲ್ಲಲಿ ಕೇವಲ ಶಿಕ್ಷಣಕ್ಕೆ ಅಂಟಿಕೊಳ್ಳದೇ ಹೊಸ ಹೋಸ ಅವಶೇಷಗಳು ಹೊರಬರಲಿ ತಾಲೂಕಾ ಮಟ್ಟದಿಂದ ರಾಜ್ಯಮಟ್ಟದ ವರೆಗೆ ಪ್ರತಿಭೆ ಗುರುತಿಸುವಂತಹ ಅವಕಾಶ ತಾಳಿಕೋಟೆ ತಾಲೂಕಿನ ಶಾಲಾ ಮಕ್ಕಳಿಗೆ ಒದಗಿಬರಲಿ ಎಂದು ಆಶಿಸಿದರು.
ಇನ್ನೋರ್ವ ಅತಿಥಿ ವಿಜಯಪೂರ ಡಿವಾಯ್‍ಪಿಸಿ ಎಚ್.ಜಿ.ಮಿರ್ಜಿ ಅವರು ಮಾತನಾಡಿ ಈ ಭಾಗದಲ್ಲಿ ಮಕ್ಕಳಲ್ಲಿ ಪ್ರತಿಭೆಗೇನು ಕೊರತೆ ಇಲ್ಲಾ ಎಲ್ಲ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತಾ ಸಾಗಿದೆ ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳು ಹೆಚ್ಚು ಕಾಣುತ್ತಿವೆ ಶಿಕ್ಷಕರ ಸೂಕ್ತ ಮಾರ್ಗದರ್ಶನದೊಂದಿಗೆ ಉತ್ತಮವಾದ ಪ್ರದರ್ಶನಗಳು ನಡೆಯಲಿ ಎಂದರು.
ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಶ್ರೀಮತಿ ವ್ಹಿ.ಎಸ್.ಚಿಲ್ಲಾಳಶೆಟ್ಟಿ, ಇಸಿಓ ಎಸ್.ಎಸ್.ಹಿರೇಮಠ, ಮಾತನಾಡಿ, ಮೂರು ವರ್ಷದ ಬಳಿಕ ಪುನಃ ಶಾಲಾ ಅಂಗಳದಲ್ಲಿ ಹಿಂದಿನ ಗತವೈಭವ ಸಾರುವ ಶೈಕ್ಷಣಿಕ ಚಟುವಟಿಕೆಗಳು ಸಾಗುತ್ತಿರುವದು ಶಿಕ್ಷಣಾಭಿಮಾನಿಗಳಿಗೆ ಖುಷಿ ಕೊಡುತ್ತಿವೆ ಎಂದರು.
ವ್ಹಿ.ಕೆ.ಎಚ್.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಅಧ್ಯಕ್ಷ ಪ್ರಲ್ಹಾದಸಿಂಗ್ ಹಜೇರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಿಂಗನಗೌಡ ದೊಡಮನಿ, ಬಿ.ಆರ್.ಸಿ. ಯು.ಬಿ.ಧರಿಕಾರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಜೆ.ರಾಠೋಡ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ, ಇಸಿಓ ಎಚ್.ಎ.ಮೇಟಿ, ಎಸ್.ಎಸ್.ರಾಮತಾಳ, ಬಿ.ಆರ್.ಪಿ. ಕೆ.ಎಸ್.ಸಜ್ಜನ, ಟೀಚರ್ ಸೋಸಾಯಿಟಿ ಅಧ್ಯಕ್ಷ ಆರ್.ಎಸ್.ಹಿಪ್ಪರಗಿ, ಹರಿಸಿಂಗ್ ಮೂಲಿಮನಿ, ರತನಸಿಂಗ್ ಕೊಕಟನೂರ, ಟಿ.ಎಸ್.ಲಮಾಣೆ, ಸಿ.ಆರ್.ಪಿ. ಆರ್.ಎ.ವಿಜಾಪೂರ, ಸುರೇಶ ವಾಲಿಕಾರ, ಬಿ.ಎ.ವಿಜಾಪೂರ, ಎಸ್.ಎಸ್.ಯಾಳವಾರ, ಜಾವೀದ್ ಯಾಕೀನ್, ಸಿ.ಎಸ್.ಸಿದ್ದರಡ್ಡಿ, ಎಸ್.ಎಂ.ಕಡೇಕಲ್ಲ, ವ್ಹಿ.ಕೆ.ಎಚ್.ಮುಖ್ಯಗುರುಗಳಾದ ಎಂ.ಡಿ.ಮುಲ್ಲಾ, ಜೆ.ಆರ್.ಡೋಣಿ, ರಶೀದ ಮೇತ್ರಿ, ಕಜಾಪ ಅಧ್ಯಕ್ಷ ಸಿದ್ದನಗೌಡ ಕಾಶಿನಕುಂಟಿ, ಎಸ್.ಎಸ್.ಖಾಜಿ, ಪ್ರಕಾಶ ಕಟ್ಟಿಮನಿ, ಸಂತೋಷ ಪವಾರ, ಸುಭಾಸ ಬಿರಾದಾರ, ಪೂಜಾ ಹಜೇರಿ, ಎನ್.ಬಿ.ಮೈಲೇಶ್ವರ, ಜ್ಯೋತಿ ನಾರಿ, ಸಿದ್ದು ಶರಣರ, ಮೊದಲಾದವರು ಇದ್ದರು.