ಮಕ್ಕಳಲ್ಲಿನ ಪ್ರತಿಭೆ ಬೆಳಕಿಗೆ ತರಲು ಶಿಕ್ಷಣ ಸಹಕಾರಿ


ಸಂಜೆವಾಣಿ ವಾರ್ತೆ
ಕುಕನೂರ:, ಮೇ.26  ತಾಲೂಕಿನ ಭಾನಾಪೂರ ಮತ್ತು ತಳಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾರಂಭವಾದ   ಬೇಸಿಗೆ ಶಿಭಿರಗಳನ್ನು ವೀಕ್ಷಣೆ ಮಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಮ್ ಪಾಂಡೆ ಹೇಳಿದರು.
ಗ್ರಾಮದ ಮಕ್ಕಳು ಬೇಸಿಗೆ ಶಿಭಿರವನ್ನು ಸಂತೋಷದಿಂದ ಕಳೆಯುವುದರ ಜ್ಯೋತೆಗೆ, *ಲಗೋರಿ, ಖೋ,ಖೋ, ಕಬಡ್ಡಿ, ಕೆರಂ, ಕೆರೆ ದಡ, ಹಾವು ಏಣಿ* ಆಟವಾಡಿ, ಗ್ರಾಮದ *ಆರೋಗ್ಯ ಕೇಂದ್ರ, ಪೋಸ್ಟ ಆಫೀಸ್, ಗ್ರಾಮ ಪಂಚಾಯತಿ, ಕುಡಿಯುವ ನೀರಿನ ನಿರ್ವಹಣೆ, ಸ್ವ ಸಹಾಯ ಸಂಘಗಳ* ಕಾರ್ಯವೈಖರಿಗಳನ್ನು ತಿಳಿದುಕೊಳ್ಳಲು  ಸಹಕಾರಿಯಾಗಿದೆ ಎಂದು ಪುಟಾಣಿಗಳು ಮಾನ್ಯರಿಗೆ ತಿಳಿಸಿ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು.
ಮಕ್ಕಳು ದೈನಂದಿನ ಚಟುವಟಿಕೆಯಲ್ಲಿ ಮಾಡಿದ ಕ್ರಾಪ್ಟ ಗಳನ್ನು ಮಾನ್ಯರ ಸಮ್ಮುಖದಲ್ಲಿ ಪ್ರದರ್ಶನ ಮಾಡಿದರು.
ಚಿಣ್ಣರೊಂದಿಗೆ ಲಗೋರಿ ಆಟವಾಡಿದ  ರಾಹುಲ್ ರತ್ನಮ್ ಪಾಂಡೆ:
ನಂತರ ಮಾನ್ಯರು ತಳಕಲ್ ಗ್ರಾಮ ಪಂಚಾಯತಿ ಉದ್ಯಾನವನ, ಸ್ವ ಸಹಾಯ ಸಂಘದ ಮಹಿಳೆಯರ ಮೋಬೈಲ್ ಕ್ಯಾಂಟೀನ್ ವೀಕ್ಷಣೆ ಮಾಡಿ ಸ್ವ-ಸಹಾಯ ಸಂಘದ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು,
ಆದಾಯೋತ್ಪನ್ನ ಚಟುವಟಿಕೆಗಳು ಹಮ್ಮಿಕೊಳ್ಳಲು* ಸಹಕಾರಿ ಎಂದರು.
ಈ ಸ್ಥಳದಲ್ಲಿ ಸಹಾಯಕ ನಿರ್ದೇಶಕರು ಪಂಚಾಯತ ರಾಜ್ ತಾಲೂಕ ಪಂಚಾಯತ್ ಕುಕನೂರ ವೆಂಕಟೇಶ್ ವಂದಾಲ್ ಸರ್, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರುಗಳು, SBM ಸಮಾಲೋಚಕರು, ಲೈಬ್ರರಿಯನ್ ಗಳು ಹಾಜರಿದ್ದರು.