ಮಕ್ಕಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಪರೀಕ್ಷೆ ಅತ್ಯಂತ ಮುಖ್ಯ

ಹೊನ್ನಾಳಿ.ಜ.೨ ; ಶಿಕ್ಷಣ ಎಂಬುದು ಸಾಧಕರ ಸ್ವತ್ತು ಅದು ಸೋಂಬೇರಿಗಳ ಸೊತ್ತಲ್ಲ, ಪ್ರತಿಯೊಬ್ಬರು ಚೆನ್ನಾಗಿ ಓದಿ ವಿದ್ಯಾವಂತರಾಗುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ಇಂದಿನಿಂದ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಆರಂಭವಾಗಿದ್ದು ಹೊನ್ನಾಳಿ ಪಟ್ಟಣದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದ ಶಾಸಕರು ವಿದ್ಯಾರ್ಥಿಗಳಿಗೆ ಹೂ ನೀಡಿ ಶುಭಕೋರಿದರಲ್ಲದೇ, ಕೊರೊನಾ ಜಾಗೃತಿ ಮೂಡಿಸಿದರು.ಇದೇ ವೇಳೆ ಮಾತನಾಡಿದ ಶಾಸಕರು, ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನೆಯಲ್ಲೇ ಇರ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂದಿನಿಂದ ಶಾಲಾ ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ಮೂಡಿಸಿದೆ ಎಂದರು. ವಿದ್ಯಾದಾನ ಶ್ರೇಷ್ಟವಾದ ದಾನವಾಗಿದ್ದು ಇದು ಮನುಷ್ಯನ ಬದುಕನ್ನೇ ಬದಲಾವಣೆ ಮಾಡುತ್ತದೆ ಎಂದ ಶಾಸಕರು,ಮಕ್ಕಳು ಶಾಲೆಯಲ್ಲಿ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.ಕೊರೊನಾ ಸಂದರ್ಭದಲ್ಲಿ ಪರೀಕ್ಷೆ ಮಾಡಲು ಸಾಕಷ್ಟು ವಿರೋಧ ವ್ಯಕ್ತವಾಗಿದ್ದು ನಮ್ಮ ಶಿಕ್ಷಣ ಸಚಿವರು ಅದನ್ನು ಯಶಸ್ವಿಯಾಗಿ ನಿಬಾಯಿಸಿದ್ದರು ಎಂದ ಶಾಸಕರು ಮಕ್ಕಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಪರೀಕ್ಷೆ ಅತ್ಯಂತ ಮುಖ್ಯ ಎಂದರು.ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಶಿಕ್ಷಕರು ಮಕ್ಕಳಿಗೆ ಕೊರೊನಾದ ಬಗ್ಗೆ ಜಾಗೃತಿ ಮೂಡಿಸ ಬೇಕು, ಹೀಗೆ ಜಾಗೃತಿ ಮೂಡಿಸುವುದರಿಂದ ಮಕ್ಕಳು ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ಜಾಗೃತಿ ಮೂಡಿಸಲು ಅನುಕೂಲವಾಗಲಿದೆ ಎಂದರು. ಇನ್ನು ವಿದ್ಯಾರ್ಥಿಗಳಿಗೆ ಶುಭ ಕೋರಿ ಮಾತನಾಡಿದ ಕುಡುಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಹೊಸ ವರ್ಷದಂದೆ ಶಾಲಾ ಕಾಲೇಜುಗಳು ಆರಂಭವಾಗಿರುವುದು ಸಂತೋಷ ಮೂಡಿಸಿದೆ ಎಂದರು. ತಮ್ಮ ಬಾಲ್ಯದ ಜೀವನವನ್ನು ಮಕ್ಕಳೊಂದಿಗೆ ಮೆಲುಕು ಹಾಕಿದ ರಾಜೀವ್ ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಓದಿದ್ದು ಎಂದರು. ವಿದ್ಯಾರ್ಥಿಗಳು ತಂದೆ ತಾಯಿ ಗುರುಗಳಿಗೆ ಗೌರವ ಕೊಡ ಬೇಕು, ದುಶ್ಚಟಗಳನ್ನು ಕಲಿಯ ಬಾರದು, ಪರಿಸರ ಪ್ರೇಮಿ ಮಾನವ ಪ್ರೇಮಿಗಳಾಗ ಬೇಕೆಂದ ಶಾಸಕರು, ಯಾರು ಚೆನ್ನಾಗಿ ಓದುತ್ತಾರೋ ಅವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಎಂದರು.ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದದಸ್ಯರಾದ ಸುರೇಂದ್ರನಾಯ್ಕ, ತಾಂಡಾಭಿವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೀವ್ ಸೇರಿದಂತೆ ಮತ್ತಿತರಿದ್ದರು.