ಮಕ್ಕಳಲ್ಲಿನ ಅಪೌಷ್ಟಿಕತೆ ತಡೆಗೆ ಬಾಲ ಚೈತನ್ಯದ ಆರೈಕೆ:ಶಾಸಕ

ಹಗರಿಬೋಮ್ಮನಹಳ್ಳಿ:ಜೂ.09 ತಾಲೂಕಿನಲ್ಲಿ ಈಗಾಗಲೇ ಅಪೌಸ್ಟಿಕತೆಯ 136 ಮಕ್ಕಳನ್ನು ಗುರುತಿಸಿದ್ದು ತಲಾ 50 ಮಕ್ಕಳಂತೆ ಹಂತ ಹಂತವಾಗಿ ವಸತಿಯೊಂದಿಗೆ ತಪಾಸಣೆ ಮಾಡಿ ಪೌಸ್ಟಿಕಾಂಶದ ಔಷಧಿ ಜೊತೆಗೆ ಪೌಸ್ಟಿಕ ಆಹಾರ ನೀಡಲಾಗುತ್ತದೆ ಎಂದು ಶಾಸಕ ಎಸ್ ಭೀಮನಾಯ್ಕ್ ತಿಳಿಸಿದರು.
ಪಟ್ಟಣದ ಕ್ಯಾತಾಯಿನಿಮರಡಿ ರಸ್ತೆಯ ಬಿಸಿಎಂ ಹಾಸ್ಟೆಲ್‍ನಲ್ಲಿ ಮಂಗಳವಾರ ಜಿಲ್ಲಾಡಳಿತ,ತಾಲೂಕ ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬಾಲ ಚೈತನ್ಯ ಯೋಜನೆ ಅಡಿಯಲ್ಲಿ ಅಪೌಸ್ಟಿಕತೆಯ ಮಕ್ಕಳ ಪೌಸ್ಟಿಕತೆಯನ್ನು ಸುಧಾರಿಸಲು ಆರೈಕೆ ಕೇಂದ್ರವನ್ನು ತೆರೆಯಲಾಯಿತು. ಸಮಾರಂಭವನ್ನು ಶಾಸಕ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಕೊರೊನಾ 2ನೇ ಅಲೆ ಜಗತ್ತನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ ಪರಿಣಾಮವಾಗಿ ಅಪಾರ ಸಾವು ನೋವು ಆಗಿದೆ ಮುಂದಿನ ದಿನಗಳಲ್ಲಿ ಬರಲಿದೆ ಎನ್ನಲಾದ 3ನೇ ಅಲೆಯ ಬೀತಿ ಭಯಾನಕತೆ ಇದೆ ಎಂದು ಅದರಲ್ಲೂ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದು ಈ 3ನೇ ಕೊರೊನಾ ಅಲೆಯನ್ನು ತಡೆಯಲು ಸಮರ್ಥವಾಗಿ ಎದುರಿಸಲು ತಾಲೂಕ ಆಡಳಿತ ಸಜ್ಜುಗೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ.
ಮಗುವಿನ ಜೊತೆಗಿರುವ ತಾಯಿಗೂ ವಸತಿ ಆಹಾರ ನೀಡಲಾಗುತ್ತಿದ್ದು ತಾಯಿಗೆ ಉದ್ಯೋಗ ಖಾತ್ರಿಯ ಯೋಜನೆಯಲ್ಲಿ 14 ದಿನಗಳ ಕೂಲಿ ಹಣ ಸಂದಾಯವಾಗಲಿದೆ ಎಂದರು.
ತಹಶೀಲ್ದಾರ ಶರಣಮ್ಮ ಮಾತನಾಡಿ ಮಕ್ಕಳ ಪೋಷಕರು ಆರೈಕೆ ಕೇಂದ್ರದಲ್ಲಿ ಪ್ರತಿದಿನ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು ವೈದ್ಯಾರ ಸಲಹೆ ಸೂಚನೆಯಂತೆ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಔಷಧಿ ಆಹಾರ ನೀಡುವ ಮೂಲಕ ಕೊರೊನಾ 3ನೇ ಅಲೆಯನ್ನು ಎದುರಿಸಲು ಮಕ್ಕಳನ್ನು ಸದೃಡಗೊಳಿಸಬೇಕಿದೆ ಎಂದರು.
ತಾಲೂಕ ವೈದ್ಯಾಧಿಕಾರಿ ಡಾ.ಶಿವರಾಜ ಹಾಗೂ ಮಕ್ಕಳ ತಜ್ಞ ಡಾ.ತಿಪ್ಪೇಸ್ವಾಮಿ ಮಾತನಾಡಿ ಮಕ್ಕಳಲ್ಲಿ ಅನುವಂಶಿಯತೆಯಿಂದ ಬೇರೆ ಬೇರೆ ಖಾಯಿಲೆಯಿಂದ ಬಳಲಿರುವ ದೇಹದ ತೂಕ ಕಡಿಮೆ ಇರುವ ದೈಹಿಕವಾಗಿ ದುರ್ಬಲವಾಗಿರುವ ಮಕ್ಕಳ ಮೇಲೆ ಕೊರೊನಾ 3ನೇ ಅಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ತಜ್ಞರ ಮುನ್ಸೂಚನೆ ಜಿಲ್ಲಾಡಳಿತ ಉಪನಿರ್ದೆಶಕರ ನಿರ್ದೆಶನದ ಮೇರೆಗೆ ಮುಂಜಾಗ್ರತೆಯಿಂದ 3ನೇ ಅಲೆಯನ್ನು ತಡೆಯಲು 14 ದಿನಗಳ ಕಾಲ ಪೌಸ್ಟಿಕತೆಯ ಕೊರತೆ ಇರುವ ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಿ ಪೌಸ್ಟಿಕ ಆಹಾರವನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಕವಿತಾ ಹಾಲ್ದಾಳ್ ವಿಜಯಕುಮಾರ್,ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಹಾಲಸಿದ್ದಪ್ಪ ಪೂಜೇರಿ, ಮಹಿಳಾ ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆಯ ಚನ್ನಪ್ಪ,ಕ್ಷೇತ್ರ ಶಿಕ್ಷಣಾಧಿಕಾರಿ ಹೊರಪೇಟೆ ಶೇಖರಪ್ಪ, ತೋಟಗಾರಿಕೆ ಇಲಾಖೆಯ ಪರಮೇಶ್ವರಪ್ಪ, ಬಿಸಿಎಂ ಇಲಾಖೆಯ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಎಂ ದಿನೀಶ್, ಲೋಕೋಪಯೋಗಿ ಇಲಾಖೆಯ ಪ್ರಭಕರ ಶೆಟ್ರು, ಪುರಸಭೆ ಮುಖ್ಯಾಧಿಕಾರಿ ಕೃಷ್ಣನಾಯ್ಕ್, ಅಂಗನವಾಡಿ ಕಾರ್ಯಕರ್ತರು ಮಕ್ಕಳ ಪೋಷಕರು ಮುಖಂಡರು ಪಾಲ್ಗೊಂಡಿದ್ದರು.