ಮಕ್ಕಳಬಗ್ಗೆ ಪಾಲಕರು ಗಮನ ಹರಿಸಲಿ : ಬಿಇಓ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ:ಮಾ.16: ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಿದಲ್ಲಿ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಬಿಇಓ ಮಜಹರ ಹುಸೇನ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹತ್ಮಾಗಾಂಧಿ ಪ್ರೌಢಶಾಲೆಯಲ್ಲಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಯುವಘಟಕದ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ವಿದ್ಯಾಭ್ಯಾಸದ ಜೊತೆಯಲ್ಲಿ ಉತ್ತಮ ಸಂಸ್ಕಾರ ರೂಪಿಸಲು ಪಾಲಕರು ತಮ್ಮ ತಮ್ಮ ಮಕ್ಕಳಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ನಮ್ಮ ಆರೋಗ್ಯ ಕಾಪಾಡಿಕೊಂಡು ಹೋಗುವುದೂ ನಮ್ಮೆಲ್ಲರ ಧ್ಯೇಯವಾಗಿದೆ. ಆರೋಗ್ಯ ಉತ್ತಮವಾಗಿದ್ದರೆ ಚನ್ನಾಗಿ ಅಭ್ಯಾಸ ಮಾಡಲು ಸಾಧ್ಯ. ಸದೃಢವಾದ ದೇಹದಲ್ಲಿ ಸುಂದರ ಮನಸ್ಸಿರುವುದು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು.
ಸದಾಶಯ ನುಡಿ ನುಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ| ಶಂಭುಲಿಂಗ ಕಾಮಣ್ಣ, ಚಾರಿತ್ರ್ಯವಂತರಾಗಿ ಬದುಕಬೇಕು. ಹನ್ನೆರಡನೇ ಶತಮಾನದ ಶರಣರ ತತ್ವಾದರ್ಶಗಳು ಜೀನವದಲ್ಲಿ ಪಾಲಿಸಿಕೊಂಡು ಬರಬೇಕು ಎಂದು ಹೇಳಿದರು.
ನಿವೃತ್ತ ಅಂಚೆ ಅಧಿಕಾರಿ ನಾಗಶೆಟ್ಟಿ ಚೋಳಾ ಮಕ್ಕಳಲ್ಲಿ ಶರಣ ಸಂಸ್ಕಾರ ವಿಷಯ ಕುರಿತು ವಿಷೇಶ ಉಪನ್ಯಾಸ ಮಂಡಿಸಿದರು. ಕೆಎಲ್‍ಇ ಸಂಸ್ಥೆಯ ಅಧ್ಯಕ್ಷೆ ಮೋಜಾಬಾಯಿ ಕಲವಾಡಿಕರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ, ಬಿಆರ್‍ಪಿ ಆನಂದ ಹಳೆಂಬರೆ, ಕಾಶಿನಾಥ ಭೂರೆ, ಪ್ರಕಾಶ ಮಾಗಾವೆ, ಬಸವರಾಜ ತೇಗಂಪೂರೆ ಉಪಸ್ಥಿತರಿದ್ದರು.
ಶೋಭಾ ನಾಗಶೆಟ್ಟೆಪ್ಪ ಸ್ವಾಗತಿಸಿದರು. ಬಿ.ಕಾಶಿನಾಥ ನಿರೂಪಿಸಿದರು. ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಜಿಲ್ಲಾಧ್ಯಕ್ಷ ಸಂತೋಷ ಹಡಪದ ವಂದಿಸಿದರು.