ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವುದಕ್ಕಾಗಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ: ಜಲಾದೆ

ಬೀದರ್:ಮಾ.10: ಮಕ್ಕಳನ್ನು ಹೆಚ್ಚೆಚ್ಚು ಸರ್ಕಾರಿ ಶಾಲೆಗಳತ್ತ ಆಕರ್ಷಿಸಲು ಹಾಗೂ ಅವರಲ್ಲಿ ಶಿಕ್ಷಣ ಗುಣಮಟ್ಟ ಸುಧಾರಿಸಲು ಸ್ಮಾಟ್ ಕ್ಲಾಸ್ ವ್ಯವಸ್ಥೆ ಮಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಹೇಳಿದರು.

ಮಂಗಳವಾರ ನಗರದ ಮೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದದಿಂದ ಸ್ಮಾರ್ಟ್ ಕ್ಲಾಸ್ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ನಮ್ಮ ಸಂಘದಿಂದ 70 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಉಪಕರಣಗಳನ್ನು ಕಲ್ಪಿಸಲಾಗಿದ್ದು, ಬರುವ ದಿನಗಳಲ್ಲಿ ಇನ್ನು ನೂರು ಶಾಲೆಗಳಲ್ಲಿ ಈ ವ್ಯವಸ್ಥೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.

ಜಿಲ್ಲೆಯಲ್ಲಿ ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರ ಆ್ಯಕ್ಟ್ ಸಂಸ್ಥೆಯಿಂದ ಸುಮಾರು 360 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಸುನಾರು 150 ಶಾಲೆಗಳಿಗೆ ವಿಜ್ಞಾನ ಕಿಟ್ ನೀಡಲಾಗಿದೆ ಎಂದವರು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬೆಳಮಗಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಸುದೈವ ದಿನಗಳು ಮತ್ತೆ ಶುರುವಾಗಿವೆ. ಒಂದು ಕಾಲದಲ್ಲಿ ಸರ್ಕಾರಿ ಶಾಲೆಗಳೆಂದರೆ ಅವು ಮಂದಿರಗಳಿಗೆ ಸಮಾನವಾಗಿದ್ದವು. ಅಷ್ಟು ಗೌರವ ಇತ್ತು. ಮಧ್ಯದಲ್ಲಿ ಖಾಸಗಿ ಶಾಲೆಗಳ ಹಾವಳಿಯಿಂದ ಅವು ಕುಂಠಿತಗೊಂಡಿದ್ದವು. ಆದರೆ ಇತ್ತಿಚೀನ ಸರ್ಕಾರಗಳು ಹಾಗೂ ಅನೇಕ ಸಂಘ, ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ಉನ್ನತಿಕರಣಗೊಳಿಸಲು ಮುಂದಾದ ಬಳಿಕ ಅವುಗಳಿಗೆ ಮತ್ತೆ ಮೊದಲಿನ ಬೆಲೆ ಬಂದಿದೆ. ಇದರಿಂದ ಇಲ್ಲಿ ಓದುವ ಬಡ ಮಕ್ಕಳಿಗೆ ತುಂಬ ಅನುಕುಲ ಆಗಲಿದೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘವು ಸರ್ಕಾರಿ ಶಾಲೆಗಳಿಗೆ ಇಮಥ ಆಧುನಿಕ ಸೌಕರ್ಯ ಕಲ್ಪಿಸಿದ್ದಕ್ಕೆ ಶಿಕ್ಷಣ ಇಲಾಖೆ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

ವಿಕಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷರು ಹಾಗೂ ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೆನಪುರೆ ಮಾತನಾಡಿ, ವಿದೇಶಗಲಲ್ಲಿ ಬಹುತೇಕ ಮಕ್ಕಳು ಸರ್ಕಾರಿ ಶಾಲೆಗಳಲ್ಲಿಯೇ ಓದುತ್ತಾರೆ. ಅಲ್ಲಿಯ ಶಾಲೆಗಳು ಹೈಟೆಕ್ ಮಾದರಿಯಿಂದ ಕೂಡಿರುತ್ತವೆ. ನಮ್ಮ ಸರ್ಕಾರಗಳು ಸಹ ಅಂಥಹದೇ ವ್ಯವಸ್ಥೆ ಇಲ್ಲೂ ಮಾಡಿದರೆ ಭ್ರಷ್ಟಾಚಾರ ಮುಕ್ತ ಭಾರತವಾಗಲು ಸಾಧ್ಯವಿದೆ. ಮಕ್ಕಲಲ್ಲಿ ವಿದ್ಯೆ ಜೊತೆಗೆ ಅವರಲ್ಲಿ ದೇಶಪ್ರೇಮ, ಸಂಸ್ಕøತಿಕ ಕಲೆಗಳು, ಕ್ರೀಡಾ ಮನೋಭಾವ ಇತ್ಯಾದಿ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸುವ ವಿಶಾಲ ವಾತಾವರಣ ಸೃಷ್ಟಿಯಾಗಬೇಕೆಂದರು.

ಎಸ್.ಡಿ.ಎಮ್.ಸಿ ಅಧ್ಯಕ್ಷ ಮಹೇಶ ಗೋರ್ನಾಳಕರ್ ಮಾತನಾಡಿ, ಇಂದು ರಾಷ್ಟ್ರಪತಿ, ಪ್ರಧಾನಿ, ವಿಜ್ಞಾನಿ, ಸಾಹಿತಿ, ತಂತ್ರಜ್ಞಾನಿಯನ್ನು ಸೃಷ್ಟಿ ಮಾಡುವವರು ಶಿಕ್ಷಕರು. ಇಂದು ದೊಡ್ಡ ಹುದ್ದೆಗಳಲ್ಲಿರುವವರೆಲ್ಲರು ಸರ್ಕರಿ ಶಾಲೆಗಳಲ್ಲಿಯೇ ಓದಿದವರು. ಆದ್ದರಿಂದ ಪ್ರತಿಯೊಬ್ಬರು ಮತ್ತೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ, ಖಾಸಗಿ ವ್ಯವಸ್ಥೆಗೆ ಬ್ರೇಕ್ ಬೀಳಬೇಕೆಂದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಬಳವಂತರಾವ ಪಾಂಡ್ರೆ ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಶಿಕ್ಷಕ ಸಂಜುಕುಮಾರ ಸ್ವಾಗತಿಸಿದರು. ದೇವಿಪ್ರಸಾದ ಕಲಾಲ ಕಾರ್ಯಕ್ರಮ ನಿರೂಪಿಸಿ, ಸರ್ಕಾರಿ ಕನ್ಯಾ ಪ್ರೌಢಶಾಲೆ ಮುಖ್ಯ ಗುರು ರಾಘವೇಂದ್ರ ಕುಲಕರ್ಣಿ ವಂದಿಸಿದರು. ನಂತರ ವಿವಿಧ ಶಾಲೆ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್ ತರಬೇತಿ ಜರುಗಿತು.