ಮಕ್ಕಳನ್ನು ಮಾದರಿ ವ್ಯಕ್ತಿಯನ್ನಾಗಿ ರೂಪಿಸಲು ಪೋಷಕರಿಗೆ ಸಲಹೆ-ಚಕ್ರವರ್ತಿ

ಸಂಜೆವಾಣಿ ವಾರ್ತೆ
ಕುರುಗೋಡು.ನ.15 ಮಕ್ಕಳನ್ನು ಸಮಾಜದಲ್ಲಿ ಮಾದರಿ ವ್ಯಕ್ತಿಯನ್ನಾಗಿ ರೂಪಿಸಲು ಪೋಷಕರು ಮುಂದಾಗಬೇಕೆಂದು ಕುರುಗೋಡಿನ ವಿದ್ಯಾ ಆಂಗ್ಲಮಾದ್ಯಮ ಶಾಲೆಯ ಕಾರ್ಯದರ್ಶಿ ವಿಎಸ್.ಚಕ್ರವರ್ತಿ ಸಲಹೆ ನೀಡಿದರು.
ಅವರು ಸೋಮವಾರ ಪಟ್ಟಣದ ವಿದ್ಯಾಆಂಗ್ಲಮಾದ್ಯಮ ಶಾಲಾಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳನ್ನು ಶಾಲೆಯಲ್ಲಿ ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಶಿಕ್ಷಕ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಶಿಕ್ಷಕರುಮಕ್ಕಳಿಗೆ ಉತ್ತಮ ದಾರಿತೋರಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡಬೇಕೆಂದು ನುಡಿದರು.
ವಿದ್ಯಾಶಾಲೆಯ ವಿದ್ಯಾರ್ಥಿ ತ್ರಿವೇಣಿ ಮಾತನಾಡಿ,ಇಂದಿನ ಮಕ್ಕಳೇ ನಾಳಿನ ಭವಿಷ್ಯದ ಭಾವೀ ಪ್ರಜೆಗಳು. ಆದ್ದರಿಂದ ಪೋಷಕರು ಆಸ್ತಿಯನ್ನಾಗಿ ಮಾಡದೇ ತಮ್ಮಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆಂದು ನುಡಿದರು.  ಶಾಲಾ ಶಿಕ್ಷಕ ಡಿ.ಬಸವನಗೌಡ ಪ್ರಸ್ತಾವಿಕವಾಗಿ ಮಾತನಾಡಿ, ಮಾಜಿ ಪ್ರಧಾನಿ ಜವಹಾರ್‍ಲಾಲ್ ನೆಹರುರವರ ಜನ್ಮದಿನವನ್ನು ಮಕ್ಕಳದಿನಾಚರಣೆಯನ್ನಾಗಿ ಆಚರಿಸುವುದು ನಿಜಕ್ಕೂ ಸಂತಸ ಸಂಗತಿ ಎಂದರು.
ವಿಶೇಷ- ವಿದ್ಯಾಶಾಲೆಯಲ್ಲಿ ಮಕ್ಕಳದಿನಾಚರಣೆಯು ಶಾಲೆಯ ವಿದ್ಯಾರ್ಥಿಗಳಿಂದಿಲೇ ಅದ್ಯಕ್ಷ ಹಾಗು ಅತಿಥಿಗಳು ವೇದಿಕೆಯಲ್ಲಿ ಕಾಣಿಸಿಕೊಂಡು ಮಕ್ಕಳದಿನಾಚರಣೆ ಆಚರಿಸಿರುವುದು ವಿಶೇಷವಾಗಿತ್ತು.
ಅದ್ಯಕ್ಷತೆಯನ್ನು 10ನೇ ತರಗತಿಯ ವಿದ್ಯಾರ್ಥಿ ಯು.ಎಂ. ಮೋಹನಕುಮಾರ್ ಅದ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ವಿದ್ಯಾರ್ಥಿಗಳಾದ ಶ್ರಯನ್‍ರೆಡ್ಡಿ, ಆರಾದ್ಯ, ಜಸ್ಮಿತ, ಎನ್.ವರುಣ್‍ಕುಮಾರ್. ಬಿ.ಜ್ಯೋತಿ, ಇಶ್ರತ್‍ಫಾತೀಮಾ, ಎಂಪಿ. ತರುಣ್‍ಕುಮಾರ್, ಲತಾ, ಎನ್.ಶಿವುಕುಮಾರ್, ಚೈತ್ರ, ಮುಖ್ಯಗುರು ಹೆಚ್. ಪ್ರಸಾದ್, ಶಿಕ್ಷಕ ಹುಲುಗಪ್ಪ, ರಾಜು, ಮಂಗಳಗೌರಿ, ಪೂಜಾ, ಪೂರ್ಣಿಮಾ, ಮಂಜುಳಾ,ಕಲಾವತಿ,ಪೂಜಾ ಸೇರಿದಂತೆ ಇತರೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.