ಮಕ್ಕಳನ್ನು ನಿರ್ಭಯವಾಗಿ ಶಾಲೆಗೆ ಕಳುಹಿಸಿ: ಡಾ.ಜಾಧವ

ಶಹಾಬಾದ್:ಜ.2: ನಗರದ ಚವ್ಹಾಣ್ ಶಿಕ್ಷಣ ಸಂಸ್ಥೆಯ ಎನ್‍ಸಿ ಇಂಗಿನಶೆಟ್ಟಿ ಶಾಲೆಯಲ್ಲಿ ಶಾಲಾ ಆರಂಭೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹೂವು ಹಾಕಿ ಶಾಲೆಯ ಅಂಗಳಕ್ಕೆ ಸ್ವಾಗತಿಸಿದರು. ಕೊರೊನಾದಿಂದಾಗಿ 9 ತಿಂಗಳಗಳಿಂದ ಸ್ಥಬ್ತಗೊಂಡಿದ್ದ ಶಾಲಾ ಅಂಗಳ ಹೊಸ ವರ್ಷದಂದ್ದು ತೆಂಗಿನ ಗಿಡಿ, ಬಾಳೆ ಗಿಡಿ, ಕಬ್ಬಿನ ಗೀಡಿ, ಮಾವಿನ ಎಲೆ ಹಾಗೂ ಹೂ, ರಂಗೋಲಿಯಿಂದ ಸಿಂಗರಿಸಿ ಮಕ್ಕಳಿಗೆ ಕೋವಿಡ್ -19 ನಿಯಮದಂತೆ ಆರತಿ ಮಾಡುವ ಮೂಲಕ ಶಾಲೆ ಪ್ರಾರಂಭಿಸಲಾಯಿತು. ಭಾನುವಾರ ಶಾಲೆಯನ್ನು ಸ್ವಚ್ಛಗೊಳ್ಳಿಸಿ ಸಂಪೂರ್ಣ ಸೈನೆಟೈಸರ್ ಮಾಡುವ ಮೂಲಕ ಸುರಕ್ಷತೆಯೊಂದಿಗೆ ಮಕ್ಕಳು ಆಗಮಿಸಲು ಸರ್ವಸಿದ್ಧತೆ ಮಾಡಲಾಗಿದೆ ಎಂದು ಮುಖ್ಯಗುರು ಸಂಗೀತಾ ದೇವರಮನಿ ತಿಳಿಸಿದರು. ಶಾಲಾ ಪ್ರಾರಂಭೋತ್ಸವ ಕಾರ್ಯಕ್ರವನ್ನು ವೈದ್ಯರಾದ ಡಾ.ಕೀಶನ ಜಾಧವರು ಮಾತನಾಡುತ್ತ, ಪಾಲಕರು ನಿರ್ಭಯವಾಗಿ ಮಕ್ಕಳಿಗೆ ಶಾಲೆಗೆ ಕಳುಹಿಸಿ ಮಕ್ಕಳ ಮಾನಸಿಕ ಬೆಳವಣಿಗೆಯೊಂದಿಗೆ ದೈಹಿಕ ಬೆಳವಣಿಗೆ ಕೂಡ ಮಹತ್ವದಿದ್ದೆ , ಕೊರೊನಾದಿಂದ ಭಯಪಡುವ ಅವಶ್ಯಕತೆ ಇಲ್ಲ ಬದಲಾಗಿ ಸುರಕ್ಷತೆಯ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೊವೀಡ್-19 ಸೋಲಿಸಲು ಪ್ರಮುಖ ಅಸ್ತವಾಗಿದೆ ಎಂದರು. ನಂದಗೋಕುಲ ಶಾಲೆಯ ಮುಖ್ಯಗುರು ಅಂಬಿಕಾ ಜಿಂಗಾಡೆ, ಸವಿತಾ ಬೆಳಗುಂಪಿ, ನಿರ್ಮಲಾ ಯಾದಗಿರಿ, ನಾಗರತ್ನ, ಸುನೀತಾ, ಸುಜಾತ ಕುಂಬಾರ, ಶ್ರೀದೇವಿ , ಸುಜಾತ, ಹಾಗೂ ವಿದ್ಯಾರ್ಥಿಗಳು , ಪಾಲಕರು ಪಾಲ್ಗೊಂಡಿದರು.