ಮಕ್ಕಳನ್ನು ಧೈರ್ಯದಿಂದ ಅಂಗನವಾಡಿಗೆ ಕಳುಹಿಸಿ


ದಾವಣಗೆರೆ. ನ. 8, ಈಗ ದಾವಣಗೆರೆ ಜಿಲ್ಲೆ ಕೋವಿಡ್ ಮುಕ್ತವಾಗಿದೆ. ಹಾಗೆ ಎಂದು ಸುಮ್ಮನಿರುವುದಲ್ಲ. ನಮ್ಮ ಹುಷಾರಿನಲ್ಲಿ ನಾವು ಇರಬೇಕು. ಪೋಷಕರು ಮಕ್ಕಳನ್ನು ಧೈರ್ಯದಿಂದ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿರಿ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ ಪೋಷಕರಿಗೆ ಕರೆ ನೀಡಿದರು.
ಇಲ್ಲಿನ ವಿನೋಬನಗರದ 3ನೇ ಮೇನ್‌ನಲ್ಲಿರುವ ಅಂಗನವಾಡಿ ಕೇಂದ್ರವನ್ನು ದೀಪ ಬೆಳಗುವ ಮೂಲಕ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆ ಇದ್ದರೆ ಒಳ್ಳೆಯದು. ಪೋಷಕರು ಮಕ್ಕಳಿಗೆ ಮಾಸ್ಕ್ ಹಾಕಿ ಕಳುಹಿಸಿರಿ ಎಂದರು.
ಈ ವಿನೋಬನಗರದ ಅಂಗನವಾಡಿ ಕೇಂದ್ರ ಬಹಳ ವರ್ಷಗಳಿಂದ ಸುಸಜ್ಜಿತವಾಗಿ ನಡೆಯುತ್ತಿದೆ. ಕೋವಿಡ್ ಹಿನ್ನಲೆಯಲ್ಲಿ ಕಳೆದೆರಡು ವರ್ಷಗಳಿಂದ ಅಂಗನವಾಡಿ ಕೇಂದ್ರ ಆರಂಭವಾಗಿರಲಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಈಗ ಇಂದಿನಿAದ ಆರಂಭಗೊAಡಿದೆ.
ಡೆAಗ್ಯೂ ಸೇರಿದಂತೆ ಹಲವಾರು ಖಾಯಿಲೆಗಳು ಬರುತ್ತಿವೆ. ಮಕ್ಕಳು ಏನೇ ಮುಟ್ಟಲಿ ಅವರ ಕೈಗಳಿಗೆ ಸ್ಯಾನಿಟೈಸರ್ ಹಾಕಬೇಕು. ಇಲ್ಲಿನ ಪೀಠೋಪಕರಣಗಳನ್ನು ಆಗಾಗ ಸ್ವಚ್ಛಗೊಳಿಸಿರಿ. ಹಲವಾರು ವೈರಸ್‌ಗಳಿರುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ತಿಂಡಿ ತಿನಿಸುಗಳನ್ನು ಮಕ್ಕಳಿಗೆ ನೀಡಬೇಡಿ. ಮಕ್ಕಳನ್ನು ಬಹಳ ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕಾಗುತ್ತದೆ. ಮಕ್ಕಳಿಗೆ ಶೀತ, ಕೆಮ್ಮು, ಜ್ವರ ಇದ್ದದ್ದು ಕಂಡು ಬಂದರೆ ಅವರಿಗೆ ರಜೆ ನೀಡಿ ಎಂದು ಹೇಳಿದರು.
ಕೇಂದ್ರದ ಮುಖ್ಯಸ್ಥೆ ಜಿ.ರೇಣುಕಮ್ಮ ಮಾತನಾಡಿ, ಇಲ್ಲಿನ ಪ್ರತಿಯೊಬ್ಬರ ಮನೆಗೂ ತೆರಳಿ ಅಂಗನವಾಡಿ ಕೇಂದ್ರದ ಬಗ್ಗೆ ಮಾಹಿತಿ ನೀಡಿ ಮಕ್ಕಳನ್ನು ಕಳುಹಿಸಲು ಮನವಿ ಮಾಡಿದ್ದೇವೆ. ಅದರಂತೆ ಕೇಂದ್ರವನ್ನು ಸ್ವಚ್ಛವಾಗಿಟ್ಟುಕೊಂಡಿದ್ದೇವೆ. ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗಳಿಗೆ ಕಳುಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಾದ ಜಲಜಾಕ್ಷಿ, ಕೆ.ಲತಾ, ಎಸ್.ಮಂಜುಳ, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಶೋಭ, ಪೋಷಕರು, ಇದ್ದರು.