ಮಕ್ಕಳನ್ನು ದೇಶ ನಿರ್ಮಾಣ ಮಾಡುವ ಶಿಲ್ಪಿಗಳಾಗಿಸಿ : ವಾತಡೆ

ಬಸವಕಲ್ಯಾಣ:ನ.18:ಮಕ್ಕಳನ್ನುದೇಶ ನಿರ್ಮಾಣ ಮಾಡುವ ಶಿಲ್ಪಿಗಳಾಗಿಸುವುದು ಶಿಕ್ಷಕರ ಗುರುತರ ಜವಾಬ್ದಾರಿಯಾಗಿದೆ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿವುದರ ಮೂಲಕ ಸಾಕ್ಷರನ್ನಾಗಿ ಮಾಡಬೇಕು ದೇಶದ ಅಭಿವೃದ್ದಿಗೆ ಶ್ರಮಿಸಬೇಕೆಂದು ಎಂದು ಬಿಜೆಪಿ ಯುವ ಮುಖಂಡ ಪ್ರದೀಪ ವಾತಡೆ ಹೇಳಿದರು.

ತಾಲೂಕಿನ ಗೌರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಮಗುವೂ ಸಹ ಭಿನ್ನವಾಗಿದ್ದು, ಮಗುವಿನಲ್ಲಿರುವಂತಹ ಪ್ರತಿಭೆಯನ್ನುಗುರುತಿಸಬೇಕು ನೆಹರು ಅವರ ಹುಟ್ಟುಹಬ್ಬದ ಅಂಗವಾಗಿ ಮಕ್ಕಳ ದಿನಾಚರಣೆ. ಮಾಡಲಾಗುತ್ತಿದೆ. ಮಕ್ಕಳು ದೇಶದ ಆಸ್ತಿಯಾಗಿದ್ದು ಬಾಲ್ಯದಲ್ಲಿ ಉತ್ತಮ ನಡೆ-ನುಡಿಯನ್ನು ಕಲಿಸುವುದರ ಮೂಲಕ ಸನ್ನಡತೆ ಯನ್ನು ರೂಢಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಶಾಲೆ ಅಗತ್ಯವಾಗಿದ್ದ ನೂತನ ಬ್ಯಾಟರಿ ಮತ್ತು ಇನೇವಟರ್ ಕೊಡುಗೆಯಾಗಿ ವಾತಡೆ ಫೌಂಡೆಷನ ವತಿಯಿಂದ ನೀಡಲಾಯಿತು ಮತ್ತು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 90% ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಬಹುಮಾನ ನೀಡಲಾಗುವುದು ಮಕ್ಕಳಲ್ಲಿ ಹುರಿದುಂಬಿಸಿದರು.

ಹುಲಸೂರ ಪಿಎಸ್ ಐ ನಿಂಗಪ್ಪ ಮಣ್ಣೂರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಹಿತ್ಯ ಕಲೆ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಸದೃಡ ದೇಶ ನಿರ್ಮಾಣ ಸುಶಿಕ್ಷಿತ ಮಕ್ಕಳಿಂದ ಮಾತ್ರ ಸಾಧ್ಯ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗಿದ್ದು ದೇಶದ ಭವಿಷ್ಯವನ್ನು ರೂಪಿಸುವವರು ಮಕ್ಕಳಾಗಿದ್ದಾರೆ ಎಂದರು.

ಶಾಲೆಯ ಮುಖ್ಯ ಗುರು ಸುಧಾಕರ್ ಮಹೇಂದ್ರ ಕರ್, ಶ್ರೀದೇವಿ ಚಿರಡೇ, ಎಸ್.ಡಿ.ಎಮ್.ಸಿ ಅಧ್ಯಕ್ಷರು ಜಮಾದಾರ್, ಆರ್.ಎಲ್.ಎಚ್.ಪಿ ಯ ನಾಗರಾಜ್ ಶೀಲವಂತ,

ಶಿವಶಂಕರ ಅಮರ್ ಶೆಟ್ಟಿ, ಡಾಕ್ಟರ್ ಮಂಜುನಾಥ್ ಭಂಡಾರಿ ,ಗುರು ಹಿಂಡೋಳೆ, ಚನಬಸವ ಬಿರಾದರ್ , ಅಮರ್ ಬಡದಾ¼,É ಪ್ರವೀಣ್ ಕಲಬಾ ,ಆನಂದ ಜೀವಣೆ , ಉಪಸ್ಥಿತರಿದ್ದರು