ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ: ದೊಡ್ಡಪ್ಪನ್ನವರ

ಬಾದಾಮಿ,ಜೂ1: ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ನಡೆಯುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವ ಮೂಲಕ ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಹೇಳಿದರು.
ಅವರು ಪಟ್ಟಣದ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು. ನೂತನವಾಗಿ ಮೊದಲನೇ ತರಗತಿಗೆ ದಾಖಲಾದ ಮಕ್ಕಳಿಗೆ ಪುಷ್ಪಾರ್ಚನೆ ಮಾಡಿ ಶುಭ ಕೋರಲಾಯಿತು. ಎಸ್.ಡಿ.ಎಂ.ಸಿ.ಅಧ್ಯಕ್ಷ ರಂಗಪ್ಪ ಕಳಸದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಪೂರ್ಣಿಮಾ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ಭಿಕ್ಷಾವತಿಮಠ, ಎಸ್.ಡಿ.ಎಂ.ಸಿ.ಅಧ್ಯಕ್ಷ ಬಸವರಾಜ ಅಂಬಿಗೇರ, ರೇಖಾ ಸಾವಳಗಿ, ಶಿಕ್ಷಣ ಸಂಯೋಜಕ ವಿ.ಎಸ್.ಹಿರೇಮಠ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎ.ಹದ್ಲಿ, ಜೆ.ಎ.ಶೇಖ್, ರವಿ ಕಂಗಳ, ಬಿ.ಎಫ್.ಕುಂಬಾರ, ಎಸ್.ಎಸ್.ಯಲಿಗಾರ, ಎನ್.ಡಿ.ಬೀಳಗಿ, ಎಸ್.ಎಸ್.ಚೌಕದ, ಎಚ್.ಆರ್.ಕಡಿವಾಲ, ಕೆ.ಎಸ್.ಮಸಬಿನಾಳ, ಕೆ.ಎಸ್.ಭಾವಿಕಟ್ಟಿ ಹಾಜರಿದ್ದರು.
ಶಿಕ್ಷಕ ಇಲಾಳ ಸ್ವಾಗತಿಸಿದರು. ಮುಖ್ಯಶಿಕ್ಷಕ ಬಿ.ಎಸ್.ಕರಡಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಶಿವಪ್ರಕಾಶ ಇಟಗಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಅಕ್ಷರ ಬಂಡಿಗೆ ಚಾಲನೆ: ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಕ್ಷರ ಬಂಡಿಗೆ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಚಾಲನೆ ನೀಡಿದರು. ಅಕ್ಷರ ಬಂಡಿಯ ಮೂಲಕ ವಿಶೇಷ ಆಕರ್ಷಕ ಮೆರವಣಿಗೆಯು ಪಟ್ಟಣದ ವಿದ್ಯಾನಗರ, ಕೆ.ಎಂ.ಪಿ.ರಸ್ತೆ ಹಾಗೂ ಮುಖ್ಯರಸ್ತೆಯ ಮೂಲಕ ತೆರಳಿ ಅಕ್ಷರ ಜಾಗೃತಿ ಮೂಡಿಸಲಾಯಿತು. ಮಕ್ಕಳನ್ನು ಶಾಲೆಗೆ ಕಳುಹಿಸಿ, ಮೊದಲ ದಿನ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಮಕ್ಕಳು ಮೊದಲ ದಿನ ಸಂತಸದಿಂದ ಶಾಲೆಗೆ ಹಾಜರಾದರು. ಬಾದಾಮಿ ಸಮೂಹದ ಎಲ್ಲ ಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು, ಶಾಲಾ ಮಕ್ಕಳು, ಪಾಲಕರು, ಎಸ್.ಡಿ.ಎಂ.ಸಿ.ಪದಾಧಿಕಾರಿಗಳು ಹಾಜರಿದ್ದರು.