ಮಕ್ಕಳಂತೆ ಮರಗಳನ್ನು ಬೆಳೆಸಿ: ಅಖಿಲಗೌಡ ಪಾಟೀಲ

ಕೊಲ್ಹಾರ:ಜೂ.7: ಅರಣ್ಯ ಸಂಪತ್ತನ್ನು ಮಾನವ ನಿರಂತರವಾಗಿ ನಾಶ ಮಾಡುತ್ತಿರುವುದರಿಂದ ಪ್ರಕೃತಿ ವಿಕೋಪಗೊಂಡು ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಉಂಟಾಗುತ್ತಿವೆ. ಇದನ್ನು ತಪ್ಪಿಸಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾದ ಮಂಡಲ ಅಧ್ಯಕ್ಷ ಅಖಿಲಗೌಡ ಪಾಟೀಲ ಕರೆ ನೀಡಿದರು.

ತಾಲೂಕಿನ ಗರಸಂಗಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಯನ್ನು ನೆಟ್ಟು ನೀರುಣಿಸಿ ಅವರು ಮಾತನಾಡಿದರು ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಅತೀವವಾದ ಕಾಳಜಿ ಇರಬೇಕು. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಡುವ ಜೊತೆಗೆ, ಗಿಡಮರಗಳನ್ನು ಬೆಳೆಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಪ್ರಕೃತಿ ಸುಂದರವಾಗಿದ್ದರೆ, ಎಲ್ಲವೂ ಸುಂದರವಾಗಿರಲಿದೆ ಮರ-ಗಿಡಗಳು ಉಸಿರಾಟಕ್ಕೆ ಶುದ್ಧವಾದ ಗಾಳಿ ಮತ್ತು ನೆರಳು ನೀಡುತ್ತವೆ. ಮೋಡಗಳನ್ನು ತಡೆದು ಮಳೆ ಸುರಿಸುತ್ತವೆ. ಮಾನವನಿಗೆ ಸಹಕಾರಿಯಾಗಿವೆ. ಆದ್ದರಿಂದ ಮಕ್ಕಳಂತೆ ಮರಗಳನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಹಿತ ಅನೇಕರು ಉಪಸ್ಥಿತರಿದ್ದರು.