ಮಕರ ಸಂಕ್ರಾತಿ ಅಂಗವಾಗಿ ಸಾಮೂಹಿಕ ರಂಗೋಲಿ ಸ್ಪರ್ಧೆ

ಸಂಜೆವಾಣಿ ವಾರ್ಥೆ
ಸಿರುಗುಪ್ಪ ಜ 14 : ನಗರದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಮಕರ ಸಂಕ್ರಮಣ ಹಬ್ಬದ ಅಂಗವಾಗಿ ಸಾಮೂಹಿಕ ರಂಗೋಲಿ ಸ್ಪರ್ಧೆ ನಡೆಯಿತು.
ನಂತರ ಮಾತನಾಡಿದ ಅವರು ಅಸಂಖ್ಯಾತ ದೇಶೀ ವಾಸಿಗಳ ಆಚರಣೆಯಾದ ಮಕರ ಸಂಕ್ರಾತಿಯು ಸುಗ್ಗಿಯ ಸಂಭ್ರಮದ ಸಂಕೇತವಾಗಿದೆ, ಸಂಸ್ಕೃತಿಯ ತವರಾದ ನಮ್ಮ ದೇಶದಲ್ಲಿ ರಂಗೋಲಿ ಕಲೆಯು ಸಂಪ್ರದಾಯಿಕವಾಗಿದ್ದಲ್ಲದೇ ಸಂಸ್ಕೃತಿಯ ಹಿರಿಮೆಯಾಗಿದೆ, ಇಂದಿನ ಆಡಂಬರದ ಬದುಕಿನಲ್ಲಿ ರಂಗೋಲಿ ಕಲೆಯು ಮರೆಮಾಚುತ್ತಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕೃತಿಯ ಸಂಸ್ಕಾರವನ್ನು ಕಲಿಸುವುದು, ನಮ್ಮ ಸಂಪ್ರದಾಯಿಕ ಹಬ್ಬಗಳ ಹಿನ್ನೆಲೆಯನ್ನು ಜಾಗೃತಿ ಮೂಡಿಸುವುದರಿಂದ ಮುಂದಿನ ಪೀಳಿಗೆಗಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ.
ಸಾಮೂಹಿಕ ರಂಗೋಲಿ ಸ್ಪರ್ಧೆಯಲ್ಲಿ ಮೂಡಿದ ವಿವಿಧ ಆಕೃತಿಯ ರಂಗೋಲಿಯ ಚಿತ್ರಗಳು ಸಾರ್ವಜನಿಕರನ್ನು ಆಕರ್ಷಿಸಿದವು.
ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬ್ರಹ್ಮಕುಮಾರಿ ಪೂರ್ಣಿಮ ಅಕ್ಕ , ಲಕ್ಷಮ್ಮ, ಸಿಂಗಾಪುರ ಗೌತಮಿ, ಚಾಗಿ ವೀಣಾ, ಮಂಗಳಗೌರಿ ಅಕ್ಕ, ಮಾಳವಿಕ ಅಕ್ಕ, ಪುಷ್ಪಾ ಅಕ್ಕ ಸೇರಿದಂತೆ ಚಿಣ್ಣರು ಇದ್ದರು.
Attachments area

ReplyForward