ಮಕರ ಸಂಕ್ರಾತಿಗೆ ಹರಿದ ಬಂದ ಜನಸ್ತೋಮ

ವಿಜಯಪುರ.ಜ೧೬:ಪಟ್ಟಣದ ಸಮೀಪದ ಕೊಮ್ಮಸಂದ್ರ ಗ್ರಾಮದಲ್ಲಿ ಮಕರ ಸಂಕ್ರಾತಿ ಹಬ್ಬದ ಅಂಗವಾಗಿ ರಸುಗಳ ಜಾತ್ರೆಯು ಡೊಳ್ಳು ಕುಣಿತದ ನಡುವೆ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆಯಿಂದ ದೇವಾಲಯಗಳನ್ನು ವಿವಿಧ ಬಗ್ಗೆಯ ಪುಷ್ವಗಳಿಂದ ಅಲಂಕಾರ ಗೊಳಿಸಲಾಗಿತು. ಇನ್ನೂ ಇತಿಹಾಸ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯ, ಓಂ ಶಕ್ತಿ ದೇವಾಲಯ, ಆಂಜೀನಯ್ಯ, ಶ್ರೀ ಯೋಗಿನಾರಯಣ ತಾತಾಯ್ಯ, ಶ್ರೀಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.
ಜಾತ್ರೆ ವಿಶೇಷ: ಈ ಜಾತ್ರೆ ಯ ಸುಮಾರು ವರ್ಷಗಳಿಂದ ಸುತ್ತಮುತ್ತಲಿನ ಗ್ರಾಮಗಳ ಸಹಕಾರದಿಂದ ಎತ್ತುಗಳ ಜಾತ್ರೆಯು ನಡೆದುಕೊಂಡು ಬರುತ್ತಿದ್ದು, ಇಂದಿಗೂ ಇಲ್ಲಿ ಅದೇ ಪದ್ದತಿಯನ್ನು ಗ್ರಾಮಸ್ಥರು ನೇರವೆರಿಸಿಕೊಂಡು ಬರುತ್ತಿದ್ದಾರೆ. ಮೊದಲು ಗ್ರಾಮದಿಂದ ಚಂದ್ರಮೌಳೇಶ್ವರ ಮೇರವಣೆಗೆಯೊಂದಿಗೆ ರಾಸುಗಳ ಜೊತೆ, ಡೊಳುಕುಣ್ಣಿತ ಹಾಗೂ ವೀರಗಾಸೆಯೊಂದಿಗೆ ಬಂದು ಗ್ರಾಮದ ದೇವರುಗಳಿಗೆ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ.
ತಂಗಿನ ಹುಟ್ಲು ವಿಶೇಷ: ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಮೊದಲು ಊರುಳುಕಾಯಿ ವಡೆಯುವುದು ವಾಡಿಕೆ ಎಲ್ಲಿದೆ. ನಂತರ ಬಂದತಂಹ ಭಕ್ತಧಿಗಳಿಗೆ ಪಾಣಕ ಮಜ್ಜಿಗೆ ಸೇವೆಯು ಇಲ್ಲಿ ಆಯೋಜಿಸುತ್ತಾರೆ.
ಪಂಡರಪುರ ಭಜನೆ ಜೋರು: ಗ್ರಾಮೀಣ ಕಲೆಯಲ್ಲಿ ಒಂದಾದ ಪಂಡರ ಪುರ ಭಜನೆಯು ಒಂದಾಗಿದೆ. ಇಲ್ಲಿ ಸುಮಾರು ವರ್ಷಗಳಿಂದ ಈ ಕಲೆಯನ್ನು ಉಳಿಸಿಕೊಂಡು ಗ್ರಾಮಸ್ಥರು ಬಂದಿರುವುದು ವಿಶೇಷವಾಗಿದೆ.
ಜಾತ್ರೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಕ್ತಧಿಗಳಿಗೆ ಪ್ರಸಾದ ವ್ಯವಸ್ಥೆಯು ಮಾಡಲಾಗಿತು.