ಮಕರ ಸಂಕ್ರಮಣದ ಪ್ರಯುಕ್ತ ಸಾಮೂಹಿಕ ಸೂರ್ಯನಮಸ್ಕಾರ

ಚಿತ್ರದುರ್ಗ: ಜ.14; ಮಕರ ಸಂಕ್ರಾಂತಿ ಅಂಗವಾಗಿ ಇಂದು ಕೇಂದ್ರ ಆಯುಷ್ ಮಂತ್ರಾಲಯದ ಸೂಚನೆಯ ಮೇರೆಗೆ ಜಾಗತಿಕವಾಗಿ 75 ಲಕ್ಷ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಮನೆ ಮನೆಗಳಲ್ಲಿ, ಯೋಗ ಕೇಂದ್ರಗಳಲ್ಲಿ ಸೂರ್ಯ ನಮಸ್ಕಾರ ಮಾಡಲು ಸೂಚಿದ್ದು ಅದರ ನಿಮಿತ್ತವಾಗಿ ಚಿತ್ರದುರ್ಗದ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ ಯೋಗ ಧ್ಯಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯೋಗ ಕೇಂದ್ರದ ಸದಸ್ಯರು ಹರಿದ್ವಾರದ ಪತಂಜಲಿ ಯೋಗ ಪೀಠದ ಜಿಲ್ಲಾ ಯೋಗ ಪ್ರಚಾರಕ  ರವಿ ಕೆ.ಅಂಬೇಕರ್ ನೇತೃತ್ವದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ” ವೈಜ್ಞಾನಿಕ ಮಾಹಿತಿ ಪ್ರಕಾರ, ಸೂರ್ಯ ನಮಸ್ಕಾರವು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಕೋವಿಡ್ ರೂಪಾಂತರಿ ಓಮಿಕ್ರಾನ್ ಸಾಂಕ್ರಾಮಿಕ ರೋಗ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಬಹಳ ಮುಖ್ಯವಾಗಿದೆ.ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಜನರಲ್ಲಿ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುವುದು ಬಹಳ ಅಗತ್ಯವಾಗಿದೆ. ದೇಹವನ್ನು ಮಾತ್ರವಲ್ಲದೆ ಮನಸನ್ನು ಬಲಪಡಿಸಲು ಸಹಾಯ ಮಾಡುವ ಸೂರ್ಯ ನಮಸ್ಕಾರವನ್ನು ಮಾಡಲು ಹೆಚ್ಚು ಹೆಚ್ಚು ಜನರನ್ನು ಉತ್ತೇಜಿಸುವ ಸಲುವಾಗಿ ಈ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ‘ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಯೋಗ ಕೇಂದ್ರದ ಸದಸ್ಯರಾದ ಶ್ರೀಮತಿ ತನುಜಾ ರುದ್ರಪ್ಪ, ಖುಷಿಯಾಬಾನು, ರೇಷ್ಮಾ ಹುಸೇನ್, ಬಸಮ್ಮ, ಅನಿತಾ, ಮಧು, ಕು.ಶ್ರೇಯಾ ಇತರರು ಭಾಗವಹಿಸಿದ್ದರು.


Attachments areaReplyReply to allForward