ಮಕರ ವಿಳಕ್ಕು, ಶಬರಿ ಮಲೆಯಾತ್ರೆ – ಭಕ್ತರ ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ

ಬೆಂಗಳೂರು, ನ ೨೨ – ಮಕರ ವಿಳಕ್ಕು ಶಬರಿ ಮಲೆಯಾತ್ರೆ ಕೈಗೊಳ್ಳುವ ಭಕ್ತಾಧಿಗಳು ಕಡ್ಡಾಯವಾಗಿ ವೆಬ್ ಸೈಟ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ಕೊಟ್ಟಿದೆ.
ಪ್ರತಿದಿನ ಸಾವಿರ ಭಕ್ತಾಧಿಗಳಿಗೆ ಮಾತ್ರ ಅವಕಾಶವಿದೆ ವಾರಾಂತ್ಯದಲ್ಲಿ ಪ್ರತಿ ದಿನ ಎರಡು ಸಾವಿರ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುವುದು ಬೇಟಿ ನೀಡುವ ೪೮ ಗಂಟೆ ಅವಧಿಗೆ ಮುನ್ನ ಕೊರೋನ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಪ್ರವೇಶ ಸ್ಥಳದಲ್ಲಿ ಅಂಟಜೆನ್ ಪರೀಕ್ಷೆಯಿದ್ದು ಅದರ ವೆಚ್ಚವನ್ನು ಭಕ್ತಾದಿಗಳೇ ಭರಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ೧೦ ವರ್ಷದ ಕೆಳಗಿನವರು ಹಾಗೂ ೬೫ ವರ್ಷ ಮೇಲ್ಪಟ್ಟವರಿಗೆ ,ಮತ್ತು ಕಾಯಿಲೆಯಿಂದ ಬಳಲುತ್ತಿರುವವರು ಯಾತ್ರೆಗೆ ಹೋಗುವಂತಿಲ್ಲ.

ಬಿಪಿಎಲ್ ಕಾರ್ಡ್ ಮತ್ತು ಆಯಷ್ಮಾನ್ ಕಾರ್ಡ್ ಹೊಂದಿರುವವರು ಪ್ರಯಾಣದ ವೇಳೆ ತಮ್ಮ ಜೊತೆಯಲ್ಲಿ ಇಟ್ಟುಕೊಂಡಿರಬೇಕು. ಯಾತ್ರಾರ್ಥಿಗಳ ಪ್ರಯಾಣಕ್ಕೆ ಎರಮೆಲು ಮತ್ತು ವೇದ ಸಾರಿಕ್ಕಾರ ಮಾರ್ಗದಲ್ಲಿ ಮಾತ್ರ ಅವಕಾಶ ನೀಡಲಾಗಿದೆ ಎಂದು ಧಾರ್ಮಿಕ ದತ್ತಿ ಕಾರ್ಯಾಲಯ ಸೂಚನೆ ನೀಡಿದೆ.