ಮಕಂಜದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ, ಎ.೯-ವ್ಯಕ್ತಿಯೊರ್ವ ನೇಣು ಬಿಗುದ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಕಂಜದಲ್ಲಿ ವರದಿಯಾಗಿದೆ.
ಮಕಂಜ ಗ್ರಾಮದ ಗುರಿಯಡ್ಕ ನಿವಾಸಿ ಭರತ್(೨೮) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತಂದೆ ಬಿಯಾಳು ,ತಾಯಿ ಪಾಚು, ಅಣ್ಣ ಕೊರಗಪ್ಪ, ಪತ್ನಿ ಭವಾನಿ, ಪುತ್ರಿ ಯಜ್ಞ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.