ಮಂದೇವಾಲದಲ್ಲಿ ಶಾಸಕ ಡಾ. ಅಜಯ್ ಸಿಂಗ್‍ರಿಂದ 6 ಕೋಟಿ ರುಪಾಯಿ ಮೊತ್ತದ ಹಲವು ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ- ಅಡಿಗಲ್ಲು

ಕಲಬುರಗಿ:ಮಾ. 05:ಜೇವರ್ಗಿ ಮತ ಕ್ಷೇತ್ರದ ಶಾಸಕರು, ವಿರೋಧ ಪಕ್ಷ ಮುಖ್ಯ ಸಚೇತಕರಾಗಿರುವ ಡಾ. ಅಜಯ್ ಸಿಂಗ್ 3 ನೇ ದಿನವಾದ ಭಾನುವಾರ ಕೂಡಾ ಜೇವರ್ಗಿ ಹಾಗೂ ಯಡ್ರಾಮಿ ವ್ಯಾಪ್ತಿಯ ತಮ್ಮ ಮತಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ, ಉದ್ಘಾಟನೆ ಮಾಡುವ ಮೂಲಕ ತಾವು ಅಭಿವೃದ್ಧಿಗೆ ಒತ್ತು ನೀಡುವ ಶಾಸಕರೆಂದು ಸಾಬೀತು ಮಾಡಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂದೇವಾಲ ಗ್ರಾಮದಲ್ಲಿ 6 ಕೋಟಿ ರು ವೆಚ್ಚದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಅಜಯ್ ಸಿಂಗ್ ಜೇವರ್ಗಿ ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಯೇ ಮ್ಮ ಸಂಕಲ್ಪವೆಂದರಲ್ಲದೆ ತಮ್ಮ ಪ್ರಗತಿ ಸಂಕಲ್ಪಕ್ಕೆ ಜನರ ಸಹಕಾರ ಕೋರಿದರು.

ಇದೇ ಸಂದರ್ಭದಲ್ಲಿ ಮಂದೇವಾಲದ ಸರ್ಕಾರಿ ಪದವಿ ಪೂರ್ವ ಕಾಲೇಜು 2 ಕೋಟಿ 61ಲP್ಷÀ ಕಾಮಗಾರಿ, ಕೆ.ಕೆ.ಆರ್.ಡಿ.ಬಿ. ಯೋಜನೆ ಅಡಿಯಲ್ಲಿ ಸರಕಾರಿ ಪದವಿ ಪೂರ್ವ(ಪಿಯು) ಕಾಲೇಜಿನ 50 ಲಕ್ಷ ರು ವೆಚ್ಚದ ಪ್ರಯೋಗಾಲಯ ಕಟ್ಟಡ ನಿರ್ಮಾಣ, ಸುಮಾರು 115 ಲಕ್ಷ ರು ವೆಚ್ಚದ ಸರಕಾರಿ ಪದವಿ ಪೂರ್ವ(ಪಿಯು) ಕಾಲೇಜಿಗೆ 6 ಕೋಣೆಗಳು ಹಾಗೂ ಶೌಚಾಲಯ ಕಾಮಗಾರಿ, ನಬಾರ್ಡ ಆರ್‍ಐಡಿಎಫ್ 24 ರ ಯೋಜನೆ ಅಡಿಯಲ್ಲಿ ಸರಕಾರಿ ಪದವಿ ಪೂರ್ವ(ಪಿಯು) ಕಾಲೇಜಿಗೆ 96 ಲಕ್ಷ ರು ವೆಚ್ಚದಲ್ಲಿನ ಕೋಣೆಗಳು ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು.

10 ಲಕ್ಷ ರು ವೆಚ್ಚದ ಶಂಕರಲಿಂಗ ದೇವಸ್ಥಾವ ಅಭಿವೃದ್ಧಿ ಕಾಮಗಾರಿ, ಜಟ್ಟಿಂಗೇಶ್ವರ ದೇವಸ್ಥಾನ ಅಭಿವೃದ್ಧಿಯ 5 ಲಕ್ಷ ರು ಕಾಮಗಾರಿ, ಕೆಂಚರಾಯ ದೇವಸ್ಥಾವ ಅಭಿವೃದ್ಧಿಯ 5 ಲಕ್ಷ ರು ಕಾಮಗಾರಿ, ಮಂದೇವಾಲ ಗ್ರಾಮದ ಹರಿಜನ ಓಣೆಯಲ್ಲಿ ಸಿ.ಸಿ ರಸ್ತೆ ನಿರ್ಮಾಣ, ಮಂದೇವಾಲ ಗ್ರಾಮದಲ್ಲಿ ಖಾಜಾಪಟೇಲ ಮನೆಯಿಂದ ಕ್ಯಾನಲ್ ರೋಡ್ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀರಾದ ರುಕ್ಕುಮ್ ಪಟೇಲ್ ಇಜೇರಿ, ಪP್ಷÀದ ಹಿರಿಯ ಮುಖಂಡರಾದ ಚಂದ್ರಶೇರ್ಖ ಹರನಾಳ, ಕಾಶಿರಾಯಗೌಡ ಯಲಗೋಡ, ಶೌಕತ್ ಅಲಿ ಆಲೂರ, ಗುರಲಿಂಗಪ್ಪಗೌಡ ಆಂದೋಲಾ, ಸಕ್ರೆಪ್ಪಗೌಡ ಬಸವಂತರಾಯ ಸಹೂಕಾರ, ಶಿವಪೂತ್ರಪ್ಪ ಸಾಹೂ ಕೋರಿ,ಶಾಂತಪ್ಪ ಸಾಹೂ ಮದರಿ, ಬಹೂದ್ದೂರ ರಾಥೋಡ, ಚನ್ನಪ್ಪ ಸೂನೂರ ಮಂದೇವಾಲ, ತಿಮ್ಮಯ್ಯ ಮುದಗಲ್, ಶರಣಬಸಪ್ಪ ಜೋಗುರ, ಸುರೇಶ ರಾಥೋಡ್, ಮೆಹಬೂಬ ಸಾಬ ದಿಲ್ಲಿ, ಭಿಮರಾಯ ಕನ್ನೋಳ್ಳಿ, ಹನುಮಂತರಾಯ ಕೆಂಬಾವಿ,ರೆವಣಸಿದ್ದಪ್ಪ ಯಾತನೂರ, ವಿಜಯ ಪಾಟೀಲ ಕಲ್ಲಹಂಗರಗಾ,ರಿಯಾಜ ಪಟೇಲ್, ಶಿವಯೋಗಿ ಗುಜಗೋಂಡ ಮಂದೇವಾಲ, ಸುನೀಲ ಬಳ್ಳೂಂಡಗಿ, ಪರಮಾನಂದ ಬಳ್ಳೂಂಡಗಿ, ಶ್ರೀಶೈಲ ಬೂಟ್ನಾಳ,ಜಾವೀದ್ ಪಟೇಲ್, ಮೈನೂದ್ದನಿ ಸಾಬ ಮು¯್ಲÁ, ಜಗದೇವ ಸುಂಬಡ, ಮೋಹನ ರಾಥೋಡ, ಸ್ವಾಮಿಲಿಂಗ ಗುಜಗೋಂಡ , ಸುರ್ಯಕಾಂತಗೌಡ ,ಸಿದ್ದಣ್ಣ ಗಡ್ಡದ್, ವಿವಿಧ ಇಲಾಖೆ ಅಧಿಕಾರಿಗಳು , ಸೇರಿದಂತೆ ಗ್ರಾಮಸ್ತರು ಉಪಸ್ಥಿತರಿದ್ದರು.