ಮಂದಿರ ಮುಖ್ಯವಲ್ಲ ನಿರುದ್ಯೋಗ ಸಮಸ್ಯೆ ನಿವಾರಣೆ ಅಗತ್ಯ

ನವದೆಹಲಿ,ಡಿ.೨೮- ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಗೆ ತಯಾರಿ ನಡೆಸುತ್ತಿರುವಾಗ, ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ , ಮಂದಿರ ಮುಖ್ಯವಲ್ಲ ಬದಲಾಗಿ, ನಿರುದ್ಯೋಗ, ಹಣದುಬ್ಬರ ಮತ್ತಿತರ ಸಮಸ್ಯೆಗೆಗಳ ನಿವಾರಣೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ.
“ನಿಮ್ಮ ನಿಮ್ಮ ಧರ್ಮವನ್ನು ಆಚರಿಸಿ, ಗೌರವಿಸಿ ಆದರೆ ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸಿ ಆಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದ್ದಾರೆ.
ರಾಮಮಂದಿರ ಉದ್ಘಾಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಅವರು” ಒಂದು ದೇಶದ ಪ್ರಧಾನಿ ೧೦ ವರ್ಷಗಳ ಕಾಲ ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂದರೆ ನಿಜಕ್ಕೂ ಅರ್ಥವಾಗದ ಸಂಗತಿ. ಪ್ರಧಾನ ಮಂತ್ರಿ ದೇವಸ್ಥಾನದಲ್ಲಿ ಹೆಚ್ಚು ಸಮಯ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.
ರಾಮ ಮಂದಿರ ನಿಜವಾದ ಸಮಸ್ಯೆಯೇ ಅಥವಾ ನಿರುದ್ಯೋಗ ಮತ್ತು ಹಣದುಬ್ಬರವೇ ಎಂದು ಪ್ರಶ್ನಿಸಿರುವ ಅವರು, ಸದ್ಯ ತಲೆದೋರಿಸುವ ಪರಿಸ್ಥಿತಿಗಳಿಗೆ ಮೊದಲು ಪರಿಹಾರ ಕಂಡುಕೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
“ನನಗೆ ಯಾವುದೇ ಧರ್ಮದ ಸಮಸ್ಯೆ ಇಲ್ಲ, ಒಮ್ಮೆ ದೇವಸ್ಥಾನಕ್ಕೆ ಹೋಗುವುದು ಸರಿ, ಆದರೆ ನೀವು ಅದನ್ನು ಮುಖ್ಯ ವೇದಿಕೆಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ದೇಶದ ೪೦ ರಷ್ಟು ಜನರು ಬಿಜೆಪಿಗೆ ಮತ ಹಾಕಿದ್ದಾರೆ ಮತ್ತು ೬೦ ರಷ್ಟು ಜನರು ಬಿಜೆಪಿಗೆ ಮತ ಹಾಕಿಲ್ಲ. ಆದರೂ ಪ್ರಧಾನಿ ದೇಶದ ಪ್ರತಿಯೊಬ್ಬರ ಪ್ರಧಾನಮಂತ್ರಿ ಹೊರತು ಪಕ್ಷದ ಪ್ರಧಾನ ಮಂತ್ರಿ ಅಲ್ಲ ಎಂದಿದ್ದಾರೆ.
ಜನರು ಉದ್ಯೋಗದ, ಹಣದುಬ್ಬರ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸವಾಲುಗಳ ಬಗ್ಗೆ ಮಾತನಾಡಬೇಕಾಗಿದೆ. ಜೊತೆಗೆ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಯಸಬೇಕು ಅದನ್ನು ಬಿಟ್ಟು ರಾಮಮಂದಿರ ನಮ್ಮ ಮುಂದಿರುವ ಸಮಸ್ಯೆ ಅಲ್ಲ ಎಂದಿದ್ದಾರೆ.
೨೦೨೪ ರ ಲೋಕಸಭೆ ಚುನಾವಣೆ “ರಾಷ್ಟ್ರದ ಭವಿಷ್ಯ” ನಿರ್ಧರಿಸುತ್ತದೆ ಎಂದು ವಿರೋಧ ಪಕ್ಷ ಇಂಡಿಯಾ ಸದಸ್ಯರು ಗಣನೆಗೆ ತೆಗೆದುಕೊಂಡಿರುವ ನಡುವೆಯೇ ಎಲೆಕ್ಟ್ರಾನಿಕ್ ಮತ ಯಂತ್ರ ವಿಷಯವನ್ನು ಗಂಭೀರ ವಿಷಯವನ್ನಾಗಿ ಪರಿಗಣಿಸಬೇಕಾಗಿದೆ ಎಂದಿದ್ದಾರೆ.