ಮಂದಿರ ಉದ್ಘಾಟನೆಯ ದಿನ ಶ್ರೀರಾಮನ ಸ್ತ್ರೋತ್ರ ಪಠಿಸಿ:ವಾಡಕರ

ತಾಳಿಕೋಟೆ : ಜ.20: ಹಿಂದು ಸಮಾಜ ಬಾಂದವರ ಆರಾಧ್ಯ ದೇವರಾಗಿರುವ ಶ್ರೀರಾಮನ ಮಂದಿರ ಉದ್ಘಾಟನೆಯ ದಿನವು ಇದೇ ದಿ.22 ರಂದು ಅಯ್ಯೋಧ್ಯಾನಗರಿಯಲ್ಲಿ ಜರುಗಲಿದ್ದು ಅಂದು ಮರಾಠಾ ಸಮಾಜದ ಬಾಂದವರು ಶ್ರೀರಾಮನ ಸ್ತ್ರೋತ್ಸವನ್ನು ಪಠಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಸಂಭಾಜಿ ವಾಡಕರ ಅವರು ಹೇಳಿದರು.
ಇದೇ ದಿ. 22 ರಂದು ಅಯೋಧ್ಯಾ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯಾಯಿಂದ ಆಗಮಿಸಿದ ಶ್ರೀರಾಮ ಮಂತ್ರಾಕ್ಷತೆಯೊಂದಿಗೆ ಶ್ರೀರಾಮನ ಭಾವಚಿತ್ರದ ಸ್ಮರಣ ಕಾಣಿಕೆಯನ್ನು ಮರಾಠಾ ಸಮಾಜ ಬಂಧುಗಳ ಮನೆ ಮನೆಗೆ ನೀಡುವ ಕಾರ್ಯಕ್ರಮಕ್ಕೂ ಮುಂಚೆ ಶ್ರೀ ಶಿವಭವಾನಿ ಮಂದಿರದಲ್ಲಿ ಮಂತ್ರಾಕ್ಷತೆಗೆ ಪೂಜಾ ಕಾರ್ಯಕ್ರಮದ ನಂತರ ಮಾತನಾಡುತ್ತಿದ್ದ ಅವರು ಶ್ರೀರಾಮ ಹಿಂದೂ ಬಾಂದವರ ಆರಾಧ್ಯ ದೇವರು ಆಗಿದ್ದಾನೆ ಅವರು ಜನಿಸಿದ ಅಯ್ಯೋಧ್ಯಾ ನಗರಿ ಇಂದು ಶ್ರೀರಾಮ ನಾಮದಿಂದ ಜಪಿಸುತ್ತಿದೆ ಇಂತಹ ಶುಭ ಸಂದರ್ಬದಲ್ಲಿ ಸಮಾಜದ ಎಲ್ಲ ಜನರು ಅಂದು ಶ್ರೀರಾಮನ ನಾಮವನ್ನು ಪಠಿಸಬೇಕು ಅಲ್ಲದೇ ಶ್ರೀರಾಮನ ಜಪಿಸುವಂತಹ ಕಾರ್ಯ ಮಾಡಬೇಕು ಸುಮಾರು 500 ವರ್ಷಗಳ ಹಿಂದೂ ಸಮಾಜ ಬಾಂದವರ ಕನಸ್ಸು ಇಂದು ಪ್ರಧಾನ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಇಡೇರುತ್ತಿದ್ದು ಅಂದು ಎಲ್ಲರ ಮನೆಗಳಲ್ಲಿ ಶ್ರೀರಾಮನ ಪೂಜೆ, ಪುನಸ್ಕಾರ, ಶ್ರೀರಾಮ ಸ್ತ್ರೋತ್ರ ಅಲ್ಲದೇ ಪಾರಾಯಣ ಒಳಗೊಂಡು ಮೊದಲಾದವುಗಳನ್ನು ಪಠಿಸಿ ಪೂಜಿಸುವಂತಹ ಕಾರ್ಯ ಮಾಡಿ ಅಂದು ಸಾಯಂಕಾಲ ಎಲ್ಲರ ಮನೆಗಳಲ್ಲಿ ದೀಪಾವಳಿ ಸಂಭ್ರಮಕ್ಕಿಂತಲೂ ಹೆಚ್ಚಿಗೆ ದೀಪಗಳನ್ನು ಬೆಳಗಿಸಿ ಶ್ರೀರಾಮನಿಗೆ ತಮ್ಮ ಭಕ್ತಿಯನ್ನು ಸಮಪಿಸಬೇಕೆಂದ ಅವರು ಮನೆಮನೆಗೆ ವಿತರಿಸಲಾಗುತ್ತಿರುವ ಮಂತ್ರಾಕ್ಷತೆಯನ್ನು ದೇವರ ಜಗಲಿಯ ಮೇಲೆ ಇಟ್ಟು ನಿತ್ಯ ಪೂಜಿಸುವಂತಹ ಕಾರ್ಯ ಮಾಡಿ ಅವಕಾಶಗಳು ಸಿಕ್ಕಾಗ ಶ್ರೀ ರಾಮನ ದರ್ಶನಕ್ಕೆ ತೆರಳಿ ಶ್ರೀರಾಮನ ಕೃಪೆಗೆ ಪಾತ್ರರಾಗೋಣವೆಂದರು.
ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಶ್ರೀ ಶಿವಭವಾನಿ ದೇವಿಗೆ ಹಾಗೂ ಶ್ರೀರಾಮನ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿ ಕ್ಷತ್ರೀಯ ಮರಾಠಾ ಸಮಾಜ ಬಾಂದವರ ಪ್ರತಿ ಮನೆಮನೆಗೆ ತೆರಳಿ ಮಂತ್ರಾಕ್ಷತೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಮಯದಲ್ಲಿ ಸಮಾಜದ ಮುಖಂಡರುಗಳಾದ ಕಾಶಿರಾಯ ಮೋಹಿತೆ, ಸಂಭಾಜಿ ಡಿಸಲೆ, ವಿಠ್ಠಲ ಮೋಹಿತೆ, ರಾಘವೇಂದ್ರ ಮಾನೆ, ನಾರಾಯಣ ಸುಭೇದಾರ, ವಿಷ್ಣು ಸಾಳುಂಕೆ, ವಿಠ್ಠಲ ಜಗತಾಪ, ಪಾಂಡು ಕದಂ, ಮಾರುತಿ ನಿಕಂ, ಮೊದಲಾದವರು ಉಪಸ್ಥಿತರಿದ್ದರು.