ಮಂದಿರ ಉದ್ಘಾಟನೆಗೆ ಸಿದ್ದು ಇಲ್ಲ!

ಮೈಸೂರು: ಸಿದ್ದರಾಮನ ಹುಂಡಿಯಲ್ಲಿ ನಿರ್ಮಾಣ ವಾಗಿರುವ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯ ಕ್ರಮದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸುತ್ತಿಲ್ಲ. ಅವರ ಪತ್ನಿ ಪಾರ್ವತಮ್ಮ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯರ ಹುಟ್ಟೂರಿನಲ್ಲಿದ್ದ ಹಳೆಯ ರಾಮ ಮಂದಿರವನ್ನು ಸಿದ್ದರಾಮಯ್ಯ ಕುಟುಂಬದವರು ಮತ್ತು ಗ್ರಾಮಸ್ಥರ ಸಹಾಯದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಜೀರ್ಣೋದ್ಧಾರ ಮಾಡಲಾಗಿದೆ. ಈ ರಾಮ ಮಂದಿರ ಇಂದು ಉದ್ಘಾಟನೆಯಾಗಲಿದ್ದು, ನಿನ್ನೆಯಿಂದಲೇ ರಾಮ ಮಂದಿರದಲ್ಲಿ ಹೋಮ-ಹವನಗಳು ಜರುಗುತ್ತಿವೆ.
ಪೂಜಾ ಕೈಂಕರ್ಯಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಹೋಮ-ಹವನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ದೇವರ ಪ್ರತಿಸ್ಠಾಪನೆ ಕಾರ್ಯಕ್ರಮ ಹಾಗೂ ಕಳಸ ಪೂಜೆ ನಡೆಯುತ್ತಿದ್ದು, ಮಧ್ಯಾಹ್ನ 12 ಗಂಟೆಗೆ ಸರಳವಾಗಿ ದೇವಾಲಯ ಉದ್ಘಾಟನೆಯಾಗಲಿದೆ.
ಅಯೋಧ್ಯೆಗೂ ಮುನ್ನ ಸಿದ್ದರಾಮಯ್ಯರ ಊರಲ್ಲಿ ರಾಮಮಂದಿರ ನಿರ್ಮಾಣ.. ಇಲ್ಲೇ `ಶ್ರೀರಾಮ’ನ ದರ್ಶನಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸುತ್ತಿಲ್ಲ. ಬದಲಿಗೆ ಅವರ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಹಾಗೂ ಸ್ಥಳೀಯ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.