ಮಂದಾರ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ತಿಳಿಸುತ್ತದೆ-ಹವಳೆ

ಮಂದಾರ, ಸವಿಜೇನು ಕೃತಿಗಳು ಲೋಕಾರ್ಪಣೆ
ರಾಯಚೂರು, ಜುಲೈ, ಮಂದಾರ ಜೀವನದಲ್ಲಿ ಕೇವಲ ಸುಗಂಧವನ್ನು ನೀಡದೆ ಲೋಕಾರ್ಪಣೆ ಮೂಲಕ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂಬುದರ ಜೊತೆಯಲ್ಲಿ ಸಂಪತ್ತನ್ನು ನೀಡುತ್ತದೆ ಎಂದು ಹಿರಿಯ ಸಾಹಿತಿಗಳಾದ ರಾಮಣ್ಣ ಹವಳೆ ಅವರು ಹೇಳಿದರು.
ಅವರಿಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಅಯ್ಯಪ್ಪ ಹುಡಾ ರವರ ಮಂದಾರ ಹೈಕು ಸಂಚಲನ ಹಾಗೂ ಸಿ. ಪಿ ಓದಿಸೋಮಠ ರವರ ಸವಿಜೇನು ಎಂಬ ಸಂಕಲನದ ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತಾ,
ಮಂದಾರ ಪುಸ್ತಕವನ್ನು ಮೂಲ ಆಧಾರವನ್ನಾಗಿ ಇಟ್ಟುಕೊಂಡು ಜೀವನದಲ್ಲಿ ಯಾವ ರೀತಿ ಬದುಕಬೇಕು ಮಾತು ನಿಂತಾಗ ಮೌನ ಪ್ರತಿ ಉತ್ತರ ನೀಡುತ್ತದೆ ಎಂದರು.
ಬಾಲ್ಯ ಜೀವನದ ನೋವು ನಲಿವು ಹಾಗೂ ಸಿಹಿ ಕಹಿ ಗಳನ್ನು ಬಗ್ಗೆ ನಮಗೆ ಅರಿವು ಮೂಡಿಸುತ್ತದೆ ಎಂದರು.
ಮಂದಾರ ಪುಸ್ತಕ ಓದುಗಾರರನ್ನು ಹೆಚ್ಚಾಗಿ ಗಮನ ಸೆಳೆಯುತ್ತದೆ ಎಂದರು
ಹಿರಿಯ ಸಾಹಿತಿ ರುದ್ರಪ್ಪ ಪಗಡದಿನ್ನಿ ಅವರು ಮಾತನಾಡಿ, ಶಿವರುದ್ರಪ್ಪ ಅವರು ವಿವಿಧ ಕ್ಷೇತ್ರಗಳ ಸಾಹಿತ್ಯಗಳನ್ನು ಕನ್ನಡ ಅನುವಾದ ಮಾಡಿದರು. ಅದರಲ್ಲಿ ಜಪಾನ್ ಸಾಹಿತ್ಯ ಮೊಟ್ಟ ಮೊದಲ ಬಾರಿಗೆ ಕನ್ನಡ ಸಾಹಿತ್ಯಕ್ಕೆ ಅನುವಾದ ಕೀರ್ತಿ ಸಲ್ಲುತ್ತದೆ ಎಂದರು.
ಹೈಕು ಎಂಬುದು ಜಪಾನ್ ಭಾಷೆಯ ಒಂದು ಪದ ಇದು ನಮ್ಮನ್ನು ದೈವಿಕತ್ವಕ್ಕೆ ಸೆಳೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್, ದೇವದುರ್ಗ ಕ್ಷೇತ್ರ ಶಿಕ್ಷಣಧಿಕಾರಿ ಸವಿಜೇನು ಸಂಕಲನ ಲೇಖಕಿ ಆರ್. ಇಂದಿರಾ, ಮಸ್ಕಿ ಉಪನ್ಯಾಸಕ ಮಹಾಂತೇಶ್ ಮಸ್ಕಿ, ಕ. ಸಾ. ಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಕೃತಿಕಾರ ಅಯ್ಯಪ್ಪ ಹುಡಾ, ಹಾಗೂ ಸಿ. ಪಿ ಓದಿಸೋಮಠ ಸೇರಿದಂತೆ ಉಪಸ್ಥಿತರಿದ್ದರು.