ಮಂದರವಾಡ: 25 ರಿಂದ ಸಿದ್ಧಬಸವೇಶ್ವರ ಪುರಾಣ ಪ್ರವಚನ

ಕಲಬುರಗಿ,ಮೇ.18-ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸುಕ್ಷೇತ್ರ ಮಂದರವಾಡ ಗ್ರಾಮದಲ್ಲಿ ಸಿದ್ಧ ಬಸವೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ಯ ಮೇ.25 ರಿಂದ ಜೂನ್ 6 ರವರೆಗೆ ಪ್ರತಿದಿನ ಸಂಜೆ 8 ಗಂಟೆಗೆ ಪವಾಡ ಪುರುಷ ಸಿದ್ಧಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಹೊನ್ನಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಮಠದ ಚಂದ್ರಗುಂಡ ಶಿವಾಚಾರ್ಯರ ಸಾನಿಧ್ಯದಲ್ಲಿ, ಸೊನ್ನ ವಿರಕ್ತ ಮಠದ ಡಾ.ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜೂ.5 ರಂದು ಮುಂಜಾನೆ 9 ಗಂಟೆಗೆ ಸಿದ್ಧಬಸವೇಶ್ವರ ಮೂರ್ತಿ ಪಲ್ಲಕ್ಕಿ, ಪುರವಂತರ ಸೇವೆ, ಭೀಮಾ ನದಿಯಿಂದ ಗಂಗಸ್ಥಳ, ಕುಂಭ ಕಳಸ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಜರಗುವುದು.
ಜೂ.6 ರಂದು ಮುಂಜಾನೆ 9 ಗಂಟೆಗೆ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದೊಂದಿಗೆ ಪುರಾಣ ಮಹಾಮಂಗಲಗೊಳ್ಳುವುದು.