ಮಂದಕನಳ್ಳಿ ಗ್ರಾ.ಪಂ.ಗೆ ಆಯ್ಕೆ: ಸನ್ಮಾನ

ಬೀದರ್: ಆ.4:ತಾಲ್ಲೂಕಿನ ಮಂದಕನಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಶೀನಾಥ ಸುಭಾಷ್ ಗೌರಶೆಟ್ಟಿ ಅವರನ್ನು ಬೀದರ್ ಮೈನಾರಿಟಿ ಸ್ಪೊಟ್ರ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
ಮಂದಕನಳ್ಳಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ ಹಾಗೂ ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ. ರಿಯಾಜುದ್ದೀನ್, ಈರಪ್ಪ ಗೌರಶೆಟ್ಟಿ, ಸುದರ್ಶನ್, ಇರ್ಫಾನ್, ರಾಹುಲ್, ಸಚಿನ್, ರಾಜು ಇದ್ದರು.