ಬೀದರ:ಮೇ.29: ಪ್ರಸ್ತುತ ನೂತನ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಬೀದರ ಜಿಲ್ಲೆಗೆ ಮಂತ್ರಿಮಂಡಲದಲ್ಲಿ ಭರಪೂರ ಪ್ರಾತಿನಿಧ್ಯ ಸಿಕ್ಕಿರುವದಕ್ಕೆ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸಂತಸ ವ್ಯಕ್ತಪಡಿಸಿದೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಇಚ್ಛಾಶಕ್ತಿಯಿಂದ ಮತ್ತು ಸಿದ್ದರಾಮಯ್ಯ ನೇತ್ರತ್ವದ ನೂತನ ಸರಕಾರದ ಬದ್ದತೆಯಿಂದ ಬೀದರ ಜಿಲ್ಲೆಗೆ ಎರಡು ಸಂಪುಟ ಸ್ಥಾನಗಳು ಸಿಕ್ಕಿರುವದು ಜಿಲ್ಲೆಯ ಪ್ರಗತಿಗೆ ಪೂರಕವಾಗಿದೆ. ಬೀದರ ಜಿಲ್ಲೆಯ ನೂತನ ಸಚಿವರಾದ ಈಶ್ವರ ಖಂಡ್ರೆ ಮತ್ತು ರಹೀಮ ಖಾನ್ ರವರಿಗೆ ಜಿಲ್ಲೆಯ ಜನತೆಯ ವಿಶೇಷವಾಗಿ ರೈತ ಮತ್ತು ಸಂತ್ರಸ್ತರ ವತಿಯಿಂದ ಉಭಯ ಮಂತ್ರಿಗಳಿಗೆ ಅಭಿನಂದನೆಗಳು ಸಲ್ಲಿಸುತ್ತದೆ.
ಉಭಯ ಸಚಿವರು ಪರಿಣಾಮಕಾರಿ ಖಾತೆಗಳು ಹೊಂದಿರುವದಲ್ಲದೇ ಸಂಪುಟ ದರ್ಜೆ ಸಚಿವರಾಗಿದ್ದು, ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅತಿ ಆಪ್ತರಾಗಿದ್ದಾರೆ. ಪ್ರಯುಕ್ತ ನೂತನ ಸಚಿವರು ಬರುವ ದಿನಗಳಲ್ಲಿ ಬೀದರ ಜಿಲ್ಲೆಯು ಸರ್ವತೋಮುಖ ರಚನಾತ್ಮಕ ಪ್ರಗತಿಯ ಬಗ್ಗೆ ಮತ್ತು ಕಾರಂಜಾ ಮುಳುಗಡೆ ಸಂತ್ರಸ್ತರ ಬೇಡಿಕೆಯ ಬಗ್ಗೆ ಕಾಲಮಿತಿಯಲ್ಲಿ ಸಮಸ್ಯೆ ಈಡೇರಿಸಲು ಜನಮಾನಸ ನಿರೀಕ್ಷೆ ಇಟ್ಟುಕೊಂಡಿದೆ. ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮತ್ತು ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ವತಿಯಿಂದ ನೂತನ ಸಚಿವರು ಮತ್ತು ನೂತನ ಶಾಸಕರಿಗೆ ಸಂಪರ್ಕ ಮಾಡಿ ಚರ್ಚಿಸಿ ಆದಷ್ಟು ಶೀಘ್ರ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗುವದು. ಈ ಸಮಾಲೋಚನೆ ಸಭೆಯಲ್ಲಿ ಜಿಲ್ಲೆಯ ನೂತನ ಸಚಿವರಿಗೆ ಮತ್ತು ಶಾಸಕರಿಗೆ ಆಹ್ವಾನಿಸಲಾಗುವದು. ಸದರಿ ಸಭೆಯಲ್ಲಿ ಬೀದರ ಜಿಲ್ಲೆಯ ರಚನಾತ್ಮಕ ಪ್ರಗತಿಯ ಬಗ್ಗೆ ಮತ್ತು ಜ್ವಲಂತ ಸಮಸ್ಯೆಗಳ ನಿವಾರಣೆ ಬಗ್ಗೆ ಚರ್ಚಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗುವದು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಮತ್ತು ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಅವರು ಪತ್ರಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.