ಮಂತ್ರಾಲಯ: ೧೦೮ ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು


ಸನಾತನ, ವೈಷ್ಣವ ಪರಂಪರೆ ಬೆಳವಣಿಗೆಗೆ ಸಹಕಾರಿ-ಶಾ
ರಾಯಚೂರು,ಜು.೨೪- ತುಂಗಭದ್ರಾ ತೀರದ ಕಲಿಯುಗ ಕಾಮ ಧೇನು ಭಕ್ತರ ಕಲ್ಪವೃಕ್ಷ ಶ್ರೀರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪುಣ್ಯ ಭೂಮಿ ಮಂತ್ರಾ ಲಯದಲ್ಲಿ ೧೦೮ ಅಡಿ ಎತ್ತರದ ಶ್ರೀ ರಾಮನ ಭವ್ಯ ಪ್ರತಿಮೆ ಸ್ಥಾಪನೆಗೆ ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅಮಿತ್ ಶಾ, ಅವರು ವಿಜಯನಗರರೆಯನ್ನು ಹೊಂದಿರುವ ತುಂಗಭದ್ರಾ ನದಿ ತೀರದಲ್ಲಿ ಇಂತಹ ಬೃಹತ್ ಹಾಗೂ ಭವ್ಯ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದೆ. ಸನಾತನ ಮತ್ತು ವೈಷ್ಣವ ಪರಂಪರೆ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ. ಶೀಘ್ರದಲ್ಲಿಯೇ ಪ್ರತಿಮೆ ಸ್ಥಾಪನೆ ಕಾರ್ಯ ಪೂರ್ಣಗೊಳ್ಳಲಿ ಎಂದು ಶುಭ ಕೋರಿದರು.೧೦ ಎಕರೆ ಪ್ರದೇಶದಲ್ಲಿ ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾ ಣ ಮಾಡಲಾಗುತ್ತಿರುವ ಪಂಚ ಲೋಹದ ಶ್ರೀರಾಮನ ಮೂರ್ತಿ ಸಾಮ್ರಾಜ್ಯದ ಇತಿಹಾಸ ಪರಂಪ ಸ್ಥಾಪಿಸುವ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂತ್ರಾಲಯ ಅತ್ಯಂತ ಪವಿತ್ರ ಸ್ಥಳ: ಶ್ರೀ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಮಾತ ನಾಡಿ, ಶ್ರೀರಾಮ ದಂಡಕಾರಣ್ಯ ಯಾತ್ರೆ ವೇಳೆಯಲ್ಲಿ ಈ ಸ್ಥಳದಲ್ಲಿ ಪಾದಸ್ಪರ್ಶ ಮಾಡಿರುವ ಇತಿಹಾಸ ವಿದೆ. ಶ್ರೀರಾಘವೇಂದ್ರ ಸ್ವಾಮಿಗಳು ಇಲ್ಲಿಯೇ ನೆಲೆಸಿರುವುದರಿಂದ ಮಂತ್ರಾಲಯ ಅತ್ಯಂತ ಪವಿತ್ರ ಸ್ಥಳ ವಾಗಿದೆ ಎಂದು ಹೇಳಿದರು.
ಶ್ರೀರಾಮನ ಪಂಚಲೋಹ ಪ್ರತಿಮೆ ಸ್ಥಾಪನೆ ಮಾಡುವುದರ ಜೊತೆಯಲ್ಲಿ ಸುತ್ತಮುತ್ತ ಉದ್ಯಾನವನ ಹಾಗೂ ಮಕ್ಕಳಿಗೆ ಆಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪ್ರತಿಮೆ ಪ್ರತಿಷ್ಠಾಪನೆಗೆ ಆಗಮಿಸಲಿದ್ದಾರೆ ಎಂದು ಸುಬುಧೇಂದ್ರ ತೀರ್ಥರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶದ ಕಾರ್ಮಿಕ ಖಾತೆ ಸಚಿವ ಪಿ. ಜಯರಾಮ, ಮಾಜಿ ಸಂಸದ ಟಿ.ಜಿ.ವೆಂಕಟೇಶ, ವಿಧಾನ ಪರಿಷತ್ ಎಂ.ವಿಕ್ರರೆಡ್ಡಿ, ಮುಖಂಡ ರಾದ ಪುರುಷೋತ್ತಮ ರೆಡ್ಡಿ, ಸೀತಾರಾಮರೆಡ್ಡಿ ಹಾಗೂ ಶ್ರೀಮಠದ ಸಿಬ್ಬಂದಿ ಉಪಸ್ಥಿತರಿದ್ದರು.

ಬಾಕ್ಸ್
ಹೈದ್ರಾಬಾದ್ ಮೂಲದ ಜೈ ಶ್ರೀರಾಮ್ ಫೌಂಡೇಶನ್‌ನಿಂದ ೩೦೦ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಸುಮಾರು ೧೦ ಎಕರೆ ಪ್ರದೇಶದಲ್ಲಿ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದೆ. ಗುಜರಾತ್‌ನಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮ ಹಾಂಜಿ ಸುತಾರ್‌ಗೆ ಶ್ರೀರಾಮ ಪ್ರತಿಮೆ ತಯಾರಿಕೆ ಜವಾಬ್ದಾರಿ ನೀಡಲಾಗಿದೆ..